
ಕೊಟ್ಟೂರು : ನಗರದ ಶ್ರೀ ಕೊಟ್ಟೂರೇಶ್ವರ ಮಹಾವಿದ್ಯಾಲಯ ಕೊಟ್ಟೂರು ,ಇಲ್ಲಿ ಕ್ರೀಡಾ ವಿಭಾಗದಿಂದ ದಿನಾಂಕ 11.06.2024 ರಂದು international play of day ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ. ರವಿಕುಮಾರ್ ಇವರು ಕ್ರೀಡೆಯು ಮಾನವನಿಗೆ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ತಂದು ಕೊಡುತದೆ,ಹಾಗೂ ಸದೃಢ ದೇಹಕೆ ಕ್ರೀಡಾ ಚಟುವಟಿಕೆಗಳು ಅತಿ ಅವಶ್ಯಕವಾಗಿರುತದೆ ಎಂದು ಹೇಳಿದರು,
ವಿದ್ಯಾರ್ಥಿಗಳಿಂದ ಟೇಬಲ್ ಟೆನ್ನಿಸ್ , ಖೋ- ಖೋ ಹಾಗೂ ಕಬ್ಬಡ್ಡಿ ಕ್ರೀಡೆಗಳನ್ನು ಆಡಿಸಲಾಯಿತು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಶಿವಕುಮಾರ್ ಮತ್ತು ಬಸವರಾಜ್ ಬಣಕಾರ್ ಇವರು ಕಾರ್ಯಕ್ರಮವನ್ನು ಆಯೋಜಿಸಿದರು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್. ಎಂ. ಎಚ್. , ಪ್ರೊಫೆಸರ್ ರವೀಂದ್ರ ಗೌಡ, ಡಾ. ಚೇತನ್ ಚೌಹಾನ್, ಉಪನ್ಯಾಸಕರಾದ ಸುದರ್ಶನ್. ಬಿ . ಮತ್ತು ಎಲ್ಲ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.