ಹೊಸಪೇಟೆ (ವಿಜಯನಗರ) ಜೂನ್ 02 (ಕ.ವಾ): ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನವು ಜೂನ್ 3ರಂದು ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ನಡೆಯಲಿದ್ದು, ಮತದಾನ ಮಾಡುವಾಗ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ವಿಜಯನಗರ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಸಲಹೆ ಮಾಡಿದ್ದಾರೆ.
ಈಶಾನ್ಯ ಕರ್ನಾಟಕ ಪದವೀಧರರ ಕ್ಷೇತ್ರ ಚುನಾವಣೆಯಲ್ಲಿ ಪ್ರಾಶಸ್ತ್ರ ಮತದಾನ ಮಾಡುವಾಗ ಭಾರತ ಚುನಾವಣಾ ಆಯೋಗದ ಚಿಹ್ನೆ ಹೊಂದಿರುವ ವಯೋಲೇಟ್ ಬಣ್ಣದ ಸ್ಕೆಚ್ ಪೆನ್ನನ್ನು ಮಾತ್ರ ಬಳಸಬೇಕು., ಮತದಾನಕ್ಕಾಗಿ, ಮತಗಟ್ಟೆ ಅಧಿಕಾರಿ ನಿಮಗೆ ಒದಗಿಸಿದ ಸ್ಕೆಚ್ ಪೆನ್ನನ್ನು ಮಾತ್ರ ಬಳಸಿ. ಬೇರೆ ಯಾವುದೇ ಬಣ್ಣದ ಲೇಖನವನ್ನು ಬಳಸಬಾರದು., ನಿಮ್ಮ ಮೊದಲ ಪ್ರಾಶಸ್ತ್ರವಾಗಿ ನೀವು ಆಯ್ಕೆ ಮಾಡಿದ ಅಭ್ಯರ್ಥಿಯ ಹೆಸರಿನ ಎದುರು ಒದಗಿಸಲಾದ “ಪ್ರಾಶಸ್ತö್ಯ ಕ್ರಮ” ಎಂದು ಗುರುತಿಸಲಾದ ಅಂಕಣದಲ್ಲಿ “1” ಅಂಕಿ ನಮೂದಿಸುವ ಮೂಲಕ ಮತ ಚಲಾಯಿಸಿ. ಈ ಅಂಕಿ “1” ಅನ್ನು ಕೇವಲ ಒಬ್ಬ ಅಭ್ಯರ್ಥಿಯ ಹೆಸರಿನ ಎದುರು ಮಾತ್ರ ಬರೆಯಬೇಕು., ಒಟ್ಟು ಅಭ್ಯರ್ಥಿಗಳ ಸಂಖ್ಯೆಯಷ್ಟು ಪ್ರಾಶಸ್ತ್ರ ಮತವನ್ನು ಚಲಾಯಿಸುವುದು., ನಿಮ್ಮ ಪ್ರಾಶಸ್ತö್ಯ ಕ್ರಮದಲ್ಲಿ ಅಂತಹ ಅಭ್ಯರ್ಥಿಗಳ ಹೆಸರುಗಳ ಎದುರು “ಪ್ರಾಶಸ್ತö್ಯದ ಕ್ರಮ” ಎಂದು ಗುರುತಿಸಲಾದ ಕಾಲಂನಲ್ಲಿ, ನಂತರದ ಅಂಕಿಗಳು ಅಂದರೆ 2,3,4 ಇತ್ಯಾದಿಗಳನ್ನು ನಮೂದಿಸುವ ಮೂಲಕ ಉಳಿದ ಅಭ್ಯರ್ಥಿಗಳಿಗೆ ನಿಮ್ಮ ಪ್ರಾಶಸ್ತö್ಯಗಳನ್ನು ಮತ ಚಲಾಯಿಸಬಹುದು., ನೀವು ಯಾವುದೇ ಅಭ್ಯರ್ಥಿಯ ಹೆಸರಿನ ಎದುರು ಕೇವಲ ಒಂದು ಅಂಕಿ ಹಾಕಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಒಂದೇ ಅಂಕಿ ಒಂದಕ್ಕಿAತ ಹೆಚ್ಚು ಅಭ್ಯರ್ಥಿಗಳ ಹೆಸರಿನ ಎದುರು ಹಾಕಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು., ಪ್ರಾಶಸ್ತ್ರವನ್ನು ಅಂಕಿಗಳಲ್ಲಿ ಮಾತ್ರ ಸೂಚಿಸಬೇಕು, ಅಂದರೆ 1, 2, 3 ಇತ್ಯಾದಿ ಭಾರತೀಯ ಅಂಕಿಗಳ ಅಂತರರಾಷ್ಟ್ರೀಯ ರೂಪದಲ್ಲಿ, ರೋಮನ್ (1, 11, I, Iಗಿ) ರೂಪದಲ್ಲಿ ಅಥವಾ ಕನ್ನಡದಲ್ಲಿ (1, 2, 3, 4) ಗುರುತಿಸಬಹುದು., ನಿಮ್ಮ ಹೆಸರು ಅಥವಾ ಯಾವುದೇ ಪದಗಳನ್ನು ಬರೆಯಬೇಡಿ ಮತ್ತು ಮತಪತ್ರದಲ್ಲಿ ನಿಮ್ಮ ಸಹಿ ಅಥವಾ ಕಿರುಸಹಿ ಉಪನಾಮ ಇತ್ಯಾದಿಗಳನ್ನು ಹಾಕಬೇಡಿ. ಅಲ್ಲದೆ, ನಿಮ್ಮ ಹೆಬ್ಬೆರಳಿನ ಗುರುತನ್ನು ಹಾಕಬೇಡಿ. ಇವುಗಳು ನಿಮ್ಮ ಮತಪತ್ರವನ್ನು ಅಸಿಂಧುಗೊಳಿಸುತ್ತವೆ., ನಿಮ್ಮ ಪ್ರಾಶಸ್ತ್ರವನ್ನು ಸೂಚಿಸಲು ನಿಮ್ಮ ಆಯ್ಕೆಯ ಅಭ್ಯರ್ಥಿಗಳ ಎದುರು ಯಾವುದೇ ಗುರುತನ್ನು ಅಥವಾ ಎಕ್ಸ್ ಅಥವಾ ಎಸ್ ಗುರುತನ್ನು ಹಾಕಬೇಡಿ., ನಿಮ್ಮ ಮತಪತ್ರವನ್ನು ಮಾನ್ಯ ಮಾಡಲು, ಯಾವುದಾದರೂ ಒಂದು ಅಭ್ಯರ್ಥಿಯ ಎದುರು ಅಂಕಿ “1” ಅನ್ನು ನಮೂದಿಸುವ ಮೂಲಕ ನಿಮ್ಮ ಮೊದಲ ಪ್ರಾಶಸ್ತ್ರವನ್ನು ಸೂಚಿಸುವುದು ಅವಶ್ಯಕ. ಇತರ ಪ್ರಾಶಸ್ತö್ಯಗಳು ಐಚ್ಛಿಕವಾಗಿರುತ್ತವೆ.
ಮತಪತ್ರವು ಹೇಗೆ ಅಸಿಂಧುವಾಗುತ್ತದೆ: ಯಾವುದೇ ಅಭ್ಯರ್ಥಿಯ ಎದುರು 1ನೇ ಪ್ರಾಶಸ್ತö್ಯವನ್ನು ನಿಯಮಾನುಸಾರ ಗುರುತಿಸದಿರುವುದು., ಒಂದಕ್ಕಿAತ ಹೆಚ್ಚಿನ ಅಭ್ಯರ್ಥಿಯ ಎದುರು 1ನೇ ಪ್ರಾಶಸ್ತö್ಯವನ್ನು ಗುರುತಿಸಿರುವುದು., 1ನೇ ಪ್ರಾಶಸ್ತö್ಯವನ್ನು ನಿಗದಿತ ಅಂಕಣದಲ್ಲಿ ಗುರುತಿಸದೆ ಇರುವುದರಿಂದ 1ನೇ ಪ್ರಾಶಸ್ತö್ಯವನ್ನು ಯಾವ ಅಭ್ಯರ್ಥಿಗೆ ನೀಡಲು ಉದ್ದೇಶಿಸಲಾಗಿದೆ ಎಂಬುದನ್ನು ನಿಖರವಾಗಿ ಗುರುತಿಸುವುದು ಅಸಾಧ್ಯವಾಗಿರುವುದು., ಅಂಕಿ 1 ಮತ್ತು 2, 3 ಇತ್ಯಾದಿ ಇತರ ಕೆಲವು ಅಂಕಿಗಳನ್ನು ಸಹ ಒಂದೇ ಅಭ್ಯರ್ಥಿಯ ಹೆಸರಿನ ಎದುರು ಗುರುತಿಸಿರುವುದು., ಪ್ರಾಶಸ್ತö್ಯವನ್ನು ಅಂಕಿಗಳ ಬದಲಿಗೆ ಪದಗಳಲ್ಲಿ ಚಲಾಯಿಸಿದ (ಒಂದು, ಎರಡು/ ಒನ್ ಟೂ) ಮತಗಳು ಅಮಾನ್ಯವಾಗಿರುತ್ತದೆ., ಮತದಾರರನ್ನು ಗುರುತಿಸುವಂತಹ ಯಾವುದೇ ಗುರುತು ಅಥವಾ ಬರಹವಿರುವುದು. ಮತ್ತು ನೇರಳೆ ಬಣ್ಣದ ಸ್ಕೆಚ್ ಪೆನ್ ಅನ್ನು ಹೊರತುಪಡಿಸಿ ಬೇರೆ ಲೇಖನಿಯನ್ನು ಬಳಸಿರುವುದರಿಂದ ಮತಪತ್ರವು ಅಸಿಂಧುವಾಗುತ್ತದೆ.