ರೈಲುಗಳಿಗೆ  ತಾತ್ಕಾಲಿಕ ಬೋಗಿಗಳ ಜೋಡಣೆ

Loading

    ಹುಬ್ಬಳ್ಳಿ :  ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಈ ಕೆಳಗಿನ ರೈಲುಗಳಿಗೆ ತಾತ್ಕಾಲಿಕ ಅಧಾರದ ಮೇಲೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಲು ನೈರುತ್ಯ ರೈಲ್ವೆ ವಲಯವು ನಿರ್ಧರಿಸಿದೆ. ಅವುಗಳ ವಿವರ ಈ ಕೆಳಗಿನಂತಿವೆ.

1. ರೈಲು ಸಂಖ್ಯೆ 07339 ಎಸ್.ಎಸ್.ಎಸ್ ಹುಬ್ಬಳ್ಳಿ – ಕೆ.ಎಸ್.ಆರ್ ಬೆಂಗಳೂರು ವಿಶೇಷ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಮೂರು ಹೆಚ್ಚುವರಿ ಸ್ಲಿಪರ್ ಕ್ಲಾಸ್ ಬೋಗಿಗಳನ್ನು ಸೆಪ್ಟೆಂಬರ್ 14 ರಿಂದ 19, 2023 ರವರೆಗೆ ಜೋಡಿಸಲಾಗುತ್ತಿದೆ.

2. ರೈಲು ಸಂಖ್ಯೆ 07340 ಕೆ.ಎಸ್.ಆರ್ ಬೆಂಗಳೂರು-ಎಸ್.ಎಸ್.ಎಸ್ ಹುಬ್ಬಳ್ಳಿ ವಿಶೇಷ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಮೂರು ಹೆಚ್ಚುವರಿ ಸ್ಲಿಪರ್ ಕ್ಲಾಸ್ ಬೋಗಿಗಳನ್ನು ಸೆಪ್ಟೆಂಬರ್ 15 ರಿಂದ 20, 2023 ರವರೆಗೆ ಜೋಡಿಸಲಾಗುತ್ತಿದೆ.

3. ರೈಲು ಸಂಖ್ಯೆ 12079 ಕೆ.ಎಸ್.ಆರ್ ಬೆಂಗಳೂರು- ಎಸ್.ಎಸ್.ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ನಾನ್-ಎಸಿ ಚೇರ್ ಕಾರ್ ಬೋಗಿಯನ್ನು ಸೆಪ್ಟೆಂಬರ್ 15 ರಿಂದ 18, 2023 ರವರೆಗೆ ಜೋಡಿಸಲಾಗುತ್ತಿದೆ.

4. ರೈಲು ಸಂಖ್ಯೆ 12080 .ಎಸ್.ಎಸ್‌.ಎಸ್‌ ಹುಬ್ಬಳ್ಳಿ-ಕೆ.ಎಸ್.ಆರ್. ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ನಾನ್-ಎಸಿ ಚೇರ್ ಕಾರ್ ಬೋಗಿಯನ್ನು ಸೆಪ್ಟೆಂಬರ್ 15 ರಿಂದ 18, 2023 ರವರೆಗೆ ಜೋಡಿಸಲಾಗುತ್ತಿದೆ.

5. ರೈಲು ಸಂಖ್ಯೆ 17309 ಯಶವಂತಪುರ-ವಾಸ್ಕೋ-ಡ-ಗಾಮಾ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಎಸಿ ತ್ರಿ ಟೈಯರ್ ಬೋಗಿಯನ್ನು ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 5, 2023 ರವರೆಗೆ ಜೋಡಿಸಲಾಗುತ್ತಿದೆ.

6. ರೈಲು ಸಂಖ್ಯೆ 17310 ವಾಸ್ಕೋ-ಡ-ಗಾಮಾ-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಎಸಿ ತ್ರಿ ಟೈಯರ್ ಬೋಗಿಯನ್ನು ಸೆಪ್ಟೆಂಬರ್ 13 ರಿಂದ ಅಕ್ಟೋಬರ್ 4, 2023 ರವರೆಗೆ ಜೋಡಿಸಲಾಗುತ್ತಿದೆ.

ಪತ್ರಿಕಾ ಪ್ರಕಟಣೆ ಯನ್ನು ಶ್ರೀ ಅನೀಶ್ ಹೆಗಡ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ನೈರುತ್ಯ ರೈಲ್ವೆ, ಹುಬ್ಬಳ್ಳಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *