ವಿಜಯನಗರ : ತುಂಗಭದ್ರಾ ಜಲಾಶಯಕ್ಕೆ ಬರುತ್ತಿರುವ ಒಳ ಹರಿವಿನ ಪ್ರಮಾಣದಲ್ಲಿ ಭಾರೀ ಏರಿಕೆ ಆಗಿದ್ದು ಸದ್ಯ ಸಂಜೆ 7.30ರ ವೇಳೆಗೆ ಒಂದು ತಾಸಿನ ಅವಧಿಯಲ್ಲಿ ನದಿಗೆ 1 ಲಕ್ಷ ಕ್ಯೂಸೆಕ್ ನೀರು ಹರಿದುಬಂದಿದೆ.
ಇಂದು ಬೆಳಗಿನ ಜಾವ 9 ಗಂಟೆ ವೇಳೆಗೆ ಜಲಾಶಯದಲ್ಲಿ 21 ಟಿಎಂಸಿ ನೀರು ಸಂಗ್ರಹ ಆಗಿತ್ತು. ಇದೀಗ ಕನಿಷ 9 ಟಿಎಂಸಿ ನೀರು ಜಲಾಶಯಕ್ಕೆ ಹರಿದುಬಂದಿದೆ. ನಾಳೆ ಬೆಳಗ್ಗೆ 9 ಗಂಟೆ ವೇಳೆಗೆ ಜಲಾಶಯದಲ್ಲಿ ಕನಿಷ್ಠ 30 ಟಿಎಂಸಿ ನೀರು ಸಂಗ್ರಹ ಆಗುವುದು ಖಚಿತ ಎಂದು ಟಿಬಿ ಡ್ಯಾಂ ಬೋರ್ಡ್ ನ ಅಧಿಕಾರಿಗಳು ತಿಳಿಸಿದ್ದಾರೆ.
