ಜಿಲ್ಲಾಧಿಕಾರಿಗಳು, ಜಿಪಂ ಸಿಇಓ ಅವರಿಂದ ಅಭಿನಂದನೆ.ವಿಜಯನಗರ ಜಿಲ್ಲೆ: ಜಿಲ್ಲಾಮಟ್ಟದ ಉತ್ತಮ ಶಿಕ್ಷಕ-ಶಿಕ್ಷಕಿ ಪುರಸ್ಕಾರಕ್ಕೆ ಆಯ್ಕೆಯಾದ ಹೆಮ್ಮೆಯ ಶಿಕ್ಷಕರಿವರು

Loading

ಹೊಸಪೇಟೆ (ವಿಜಯನಗರ) : ಶಿಕ್ಷಕರ ದಿನಾಚರಣೆ ನಿಮಿತ್ತ 2024-25ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳಿಗೆ ವಿಜಯನಗರ ಜಿಲ್ಲೆಯ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ತಲಾ ಐವರಂತೆ ಒಟ್ಟು 15 ಶಿಕ್ಷಕರು ಆಯ್ಕೆಯಾಗಿದ್ದಾರೆ.


ಸೆಪ್ಟಂಬರ್ 9 ರಂದು ಬೆಳಿಗ್ಗೆ 10.30ಕ್ಕೆ ಹೊಸಪೇಟೆ ನಗರದ ಸಾಯಿಲೀಲಾ ರಂಗಮAದಿರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಂದು ಈ 15 ಜನ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಪ್ರಶಸ್ತಿಗೆ ಆಯ್ಕೆಯಾದ ಒಟ್ಟು 15 ಜನ ಶಿಕ್ಷಕರ ಪೈಕಿ ಏಳು ಜನ ಮಹಿಳಾ ಶಿಕ್ಷಕಿಯರು ಇರುವುದು ವಿಶೇಷತೆಯಾಗಿದೆ. ಹರಪನಹಳ್ಳಿ ತಾಲೂಕಿನಿಂದಲೇ ಮೂವರು ಶಿಕ್ಷಕಿಯರು ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


15 ಜನ ಶಿಕ್ಷಕ-ಶಿಕ್ಷಕಿಯರು ಯಾರು:


ಹೊಸಪೇಟೆ: ಗೌಸಿಯಾ ಬೇಗಂ.ಎA (ಸ.ಉರ್ದುಕಿ.ಪ್ರಾ.ಶಾಲೆ.ಪಿ.ಕೆ.ಹಳಿ)್ಳ, ಎಂ.ಹನುಮವ್ವ (ಸ.ಹಿ.ಪ್ರಾ.ಶಾಲೆ ವ್ಯಾಸನಕೆರೆ), ಸುಧಾಕರ.ಎ., (ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ್(ಪ್ರೌ.ವಿ.) ಹೊಸಪೇಟೆ.),

ಹೂವಿನಹಡಗಲಿ: ಜಯಪ್ಪ ಎಂ. (ಸ.ಕಿ.ಪ್ರಾ ಶಾಲೆ ಬ್ಯಾಡರಗೇರೆ ಮಾಗಳ), ಎ.ಚಂದ್ರಪ್ಪ. (ಸ.ಮಾ.ಹಿ.ಪ್ರಾ ಶಾಲೆ ಎ.ಕೆ.ಕಾಲೋನಿ ಹೊಳಲು) ಕೆ.ನಿಂಗಪ್ಪ. (ಸ.ಪ್ರೌ.ಶಾಲೆ ಮಾನ್ಯರ ಮಸಲವಾಡ.).
ಹಗರಿಬೊಮ್ಮನಹಳ್ಳಿ: ಹೆಚ್.ಸುರೇಶ. (ಸ.ಕಿ.ಪ್ರಾ.ಶಾಲೆ ಸಕ್ರಿಹಳ್ಳಿ) ಹಿರೇಮಠದ ಬಸಯ್ಯ.(ಸ.ಹಿ.ಪ್ರಾ.ಶಾಲೆ ಬಾಚಿಗೊಂಡನಹಳ್ಳಿ) ಲಕ್ಷ್ಮೀ.ಎಸ್.ಬಿ. (ಸ.ಪ್ರೌ.ಶಾಲೆ ಅಂಕಸಮುದ್ರ).


ಕೂಡ್ಲಿಗಿ: ಟಿ.ತಿಪ್ಪೇಸ್ವಾಮಿ.(ಸ.ಕಿ.ಪ್ರಾ.ಶಾಲೆ ನುಂಕನಹಳ್ಳಿ), ಸೌಭಾಗ್ಯಲಕ್ಷ್ಮೀ (ಸ.ಹಿ.ಪ್ರಾ.ಶಾಲೆ ಕೆಂಚಮಲ್ಲನಹಳ್ಳಿ), ಗೋಪಾಲನಾಯ್ಕ.ಟಿ (ಕರ್ನಾಟಕ ಪಬ್ಲಿಕ್ ಶಾಲೆ(ಪ್ರೌ.ಶಾ.ವಿ.)ಗುಡೆಕೋಟೆ) ಹರಪನಹಳ್ಳಿ: ಬಿ.ಜಿ.ಭಾನು (ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆ ಉಚ್ಚಂಗಿದುರ್ಗ), ಶ್ವೇತಾ ಜಿ (ಸ.ಹಿ.ಪ್ರಾ. ಶಾಲೆ ಹಾರಕನಾಳು), ಪರ್ವೀನ್ ಬಾನು (ಸ.ಆದರ್ಶ ವಿದ್ಯಾಲಯ ಅನಂತನಹಳ್ಳಿ.).


ಅಭಿನಂದನೆ: 2024-25ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ-ಶಿಕ್ಷಕಿ ಪ್ರಶಸ್ತಿಗಳಿಗೆ ಆಯ್ಕೆಯಾದ ಎಲ್ಲ ಶಿಕ್ಷಕರಿಗೆ ಅಭಿನಂದನೆಗಳು. ಈ ಶಿಕ್ಷಕರ ಸಾಧನೆ ಇತರರಿಗೆ ಪ್ರೇರಣೆಯಾಗಬೇಕು. ಜಿಲ್ಲಾಮಟ್ಟದ ಉತ್ತಮ ಶಿಕ್ಷಕ-ಶಿಕ್ಷಕಿ ಪ್ರಶಸ್ತಿ ಪಡೆಯುವಂತಹ ಇನ್ನು ಅನೇಕ ಜನ ಶಿಕ್ಷಕರು ನಮ್ಮ ಜಿಲ್ಲೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಸಹ ಪುರಸ್ಕಾರ ಸಿಗಲಿದೆ. ವಿಜಯನಗರ ಹೊಸ ಜಿಲ್ಲೆಯಾಗಿರುವುದರಿಂದ ಜನರಿಗೆ ಸಾಕಷ್ಟು ನಿರೀಕ್ಷೆ ಇದೆ. ಇದನ್ನು ಪ್ರತಿಯೊಬ್ಬ ಶಿಕ್ಷಕರು ಅರಿತು ಜಿಲ್ಲೆಗೆ ತಮ್ಮಿಂದ ಏನಾದರು ಕೊಡುಗೆ ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಹಾಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ ಷಾ ಅವರು ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *