ಹಂಪಿಯಲ್ಲಿ ಜಿ- 20 ರಾಷ್ಟ್ರಗಳ ಸಾಂಸ್ಕೃತಿಕ ಕಾರ್ಯಪಡೆ ಶೃಂಗಸಭೆಯ ಕೊನೆಯ ದಿನವಾದ ಬುಧವಾರ, ಹಜಾರರಾಮ ದೇವಸ್ಥಾನದ ಪ್ರಾಂಗಣದಲ್ಲಿ ವಿದೇಶಿ ಯೋಗಾಸನ ಮಾಡಿದರು. ಪ್ರತಿನಿಧಿಗಳು.
ಬೆಳಗ್ಗೆ 6ರಿಂದ 7:30ರ ವರೆಗೆ ಆಯುಷ್ ಇಲಾಖೆ ನುರಿತ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಓಂಕಾರ, ಗಾಯತ್ರಿ ಮಂತ್ರ ಪಠಣದೊಂದಿಗೆ ಆರಂಭಗೊಂಡ ಯೋಗದಲ್ಲಿ ಸರಳ ವ್ಯಾಯಾಮದೊಂದಿಗೆ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಅರ್ಧ ಚಕ್ರಾಸನ,ತ್ರಿಕೋನಾಸನ. ಭದ್ರಾಸನ.ವಜ್ರಾಸನ. ಪದ್ಮಾಸನ, ಪ್ರಾಣಾಯಾಮ ಮಾಡಿದರು.
ಸುಖಾಸನದಲ್ಲಿ ಸುಮಾರು 10 ನಿಮಿಷಗಳ ಕಾಲ ಧ್ಯಾನಕ್ಕೆ ಮೊರೆ ಹೋದರು.ಹಂಪಿಯಲ್ಲಿ ಯೋಗಾಸನ ಮಾಡುವ ಮೂಲಕ ವಿದೇಶಿ ಪ್ರತಿನಿಧಿಗಳು ಯೋಗ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂಬುದನ್ನು ಸಾರಿದರು,
ಈಗಾಗಲೇ ವಿಶ್ವ ಮಾನ್ಯತೆ ಹೊಂದಿರುವ ಯೋಗಾಸನಕ್ಕೆ ಜಿ- 20 ರಾಷ್ಟ್ರಗಳ ಪ್ರತಿನಿಧಿಗಳು ಕೂಡ ಯೋಗಾಭ್ಯಾಸ ಮಾಡುವ ಮೂಲಕ ಮತ್ತಷ್ಟು ಪುಷ್ಟಿ ನೀಡಿದರು.



