
ಹಗರಿಬೊಮ್ಮನಹಳ್ಳಿ: ದಿನಾಂಕ:29.06.2024 ರಂದು ನಗರ ಪ್ರದಕ್ಷಣೆ ವೇಳೆಯಲ್ಲಿ ಡಾ.ಅಂಬೇಡ್ಕರ್ ಬಾಲಕೀಯರ ವಸತಿ ನಿಲಯಕ್ಕೆ ಆಕಸ್ಮಿಕವಾಗಿ ಭೇಟಿ ನೀಡಲಾಯಿತು ಈ ಸಮಯದಲ್ಲಿ ದಾಸ್ತಾನು ಮತ್ತು ವಿತರಣಾ ವಹಿಯನ್ನು ಹಾಗೂ ಮಕ್ಕಳ ಹಾಜರಾತಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಪರಿಶೀಲಿಸಲಾಗಿ ಹಾಸ್ಟೆಲ್ ವಾರ್ಡನ್ ರವರು ಸದರಿ ಹಾಸ್ಟೆಲ್ನ್ನು ಸ್ವಚ್ಚವಾಗಿಟ್ಟುಕೊಂಡಿರುವುದು ಮತ್ತು ಅಡುಗೆ ಮನೆಯನ್ನು ಸ್ವಚ್ಚವಾಗಿಟ್ಟುಕೊಂಡು ಅಡುಗೆಯನ್ನು ರುಚಿಕಟ್ಟಾಗಿ ತಯಾರಿಸಿರುವುದು ಕಂಡುಬಂದಿರುತ್ತದೆ.

ಸದರಿ ನಿಲಯ ಪಾಲಕರ & ಅಡುಗೆ ಸಹಾಯಕರಿಗೆ ಅಭಿನಂದನೆ ತಿಳಿಸುತ್ತಾ ಸದರಿ ಮಕ್ಕಳಿಗೆ ಒಳ್ಳೆಯ ಊಟ ಮತ್ತು ಸ್ವಚ್ಚತೆಯ ವಾತಾವರಣ ನಿರ್ಮಿಸಿ ವಿದ್ಯಾಭ್ಯಾಸ ಕಲಿಯಲು ಅವಕಾಶ ಮಾಡುವಂತೆ ಕ್ರಮ ವಹಿಸಲು ಸಲಹೆ ನೀಡಲಾಯಿತು.