ನಾಳೆ ಸಂಜೆ ಖ್ಯಾತ ನಟ ಚೇತನ್ ಕೂಡ್ಲಿಗಿ ಗೆ ಆಗಮನ ಅಹಿಂಸಾರಿಂದ ಸಂವಾದ

Loading

ಕೂಡ್ಲಿಗಿ ಫೆ.22: ಕನ್ನಡ ಚಲನಚಿತ್ರ ಕ್ಷೇತ್ರದ ಖ್ಯಾತ ನಟರು ಹಾಗೂ ಹೋರಾಟಗಾರರಾದ ಚೇತನ್ ಅಹಿಂಸಾ ರವರು ನಾಳೆ (ಫೆ.22ರಂದು) ಸಂಜೆ ಕೂಡ್ಲಿಗಿ ಗೆ ಆಗಮಿಸಲಿದ್ದಾರೆ.

ಸಮಾನತೆ ಕರ್ನಾಟಕ ಸಂಘಟನೆಯ ವತಿಯಿಂದ ‘ಸಮಾನತೆಯ ಕರ್ನಾಟಕ ನಿರ್ಮಾಣದ ಭವಿಷ್ಯ’ದ ಕುರಿತು ನಗರದಲ್ಲಿ ನಾಳೆ ಸಂಜೆ 7 ಗಂಟೆಗೆ ಹಮ್ಮಿಕೊಂಡಿರುವ ಸಂವಾದದಲ್ಲಿ ಯುವ ಹೋರಾಟಗಾರರಾದ ಚೇತನ್ ಅಹಿಂಸಾರವರು ಭಾಗವಹಿಸಿ, ಸಮಾನ ಮನಸ್ಕರಿಂದ ಎದುರಾಗುವ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

ನಾಳೆ ನಡೆಯುವ ಈ ಸಂವಾದದಲ್ಲಿ ನಗರದಲ್ಲಿರುವ ವಿಚಾರವಂತರು. ಪ್ರಜ್ಞಾವಂತರು. ಪ್ರಬುದ್ಧರು. ವಿಶೇಷವಾಗಿ ವೈಚಾರಿಕತೆಯನ್ನು ಮೈಗೂಡಿಸಿಕೊಂಡಿರುವ ವಿದ್ಯಾವಂತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯುವ ನಟ ಚೇತನ್ ಅಹಿಂಸಾ ರೊಂದಿಗೆ ಸಂವಾದದಲ್ಲಿ ಭಾಗವಹಿಸಬೇಕಾಗಿ ಕರ್ನಾಟಕ ಸಮಾನತೆ ಸಂಘಟನೆಯ ಚೇತನ್ ಅಹಿಂಸಾ ಆಪ್ತರು ಹಾಗೂ ಚೇತನ್ ಅಹಿಂಸಾ ಪೌಂಡೇಶನ್‌ ಶಂಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *