ಅತ್ತ್ಯುತ್ತಮ ಗೆಲುವು ಸಾಧಿಸಿದ ಹಳೆ ಕೊಟ್ಟೂರು ತಂಡ

Loading

ಕೊಟ್ಟೂರಿನಲ್ಲಿ ಈಗಲ್ಸ್ ಕ್ರಿಕೆಟ್ ಅಸೋಸಿಯೇಷನ್ , ಕೊಟ್ಟೂರು ಅವರಿಂದ ಆಯೋಜಿಸಿದ ಸ್ಟಂಪರ್ ಬಾಲ್ ಟೂರ್ನಮೆಂಟ ಎರಡನೇ ಬಾರಿಗೆ ಸುಖಾಂತ್ಯ ಕಂಡಿತು.

“ಕೊಟ್ಟೂರು ಸ್ಥಳೀಯರಿಗೆ ಮಾತ್ರ ಸೀಮಿತವಾಗಿದ್ದ ಈ ಕ್ರಿಕೆಟ್ ಟೂರ್ನಮೆಂಟ್ “

ಕೊಟ್ಟೂರು : ಈಗಲ್ಸ್ ಕ್ರಿಕೆಟ್ ಅಸೋಸಿಯೇಷನ್ , ಕೊಟ್ಟೂರು ಆಯೋಜಿಸಿದ ಸ್ಟಂಪರ್ ಬಾಲ್ ಎರಡನೇ ಬಾರಿಗೆ ಡಿಸೆಂಬರ್ 7 ,8 ಎರಡು ದಿನ ಆಯೋಜಿಸಲಾಗಿತ್ತು. ಒಟ್ಟು 08 ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದ ಸೆಣಸಾಟಕ್ಕಾಗಿ ಯುವ ಕ್ರಿಕೆಟರ್ಸ್ ಮತ್ತು ಯುಥ್ ಕ್ರಿಕೆಟರ್ಸ್ ಸೆಮಿಫೈನಲ್‌ನಲ್ಲಿ ಹಣಾಹಣಿಯಾಗಿ ಯುವ ಕ್ರಿಕೆಟರ್ಸ್ ತಂಡ ಫೈನಲ್‌ಗೆ ಲಗ್ಗೆಯಿಟ್ಟಿತು. ನಂತರ
ಹಳೆ ಕೊಟ್ಟೂರು ಮತ್ತು ಹಸಿರು ಹೊನಲು ತಂಡ
ಸೆಮಿಫೈನಲ್‌ನಲ್ಲಿ ರೋಚಕದ ಆಟ ನಡೆಯುತು.
ಭಾನುವಾರ ಮಧ್ಯಾಹ್ನ ಹಳೆ ಕೊಟ್ಟೂರು ಮತ್ತು ಯುವ ಕ್ರಿಕೆಟರ್ಸ್ ಫೈನಲ್ ಆಟವನ್ನು ನಡೆದವು.

ಪ್ರಥಮ ಬಹುಮಾನ ಆಕರ್ಷಕ ಟೋಪಿ 12,000/
ಈಗಲ್ಸ್ ಕ್ರಿಕೆಟ್ ಅಸೋಸಿಯೇಷನ್ , ಕೊಟ್ಟೂರು ವತಿಯಿಂದ ನೀಡಲಾಯಿತು.ಮತ್ತು ದ್ವಿತೀಯ ಬಹುಮಾನ ಆಕರ್ಷಕ ಟ್ರೋಫಿ 10000/ ಬಹುಮಾನವನ್ನು ನಿಡಿ ಎಂ ಎಂ ಜೆ ರೇಣು ಮಾತನಾಡಿ ಕ್ರೀಡೆ ಜೀವನದಲ್ಲಿ ಬಹಳ ಮುಖ್ಯ. ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ದೈಹಿಕ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು ಎಂದರು

ಟಾಸ್ ಗೆದ್ದ ಹಳೆ ಕೊಟ್ಟೂರು ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು ನಿಗದಿತ 08 ಓವರ್‌ಗಳಲ್ಲಿ 156 ರನ್ ಪೇರಿಸಿದ ಮರು ಉತ್ತರವಾಗಿ ಯುವ ಕ್ರಿಕೆಟರ್ಸ್ ಕೊಟ್ಟೂರು ತಂಡ 3 ವಿಕಟ್‌ಗಳ ನಷ್ಟ ಅನುಭವಿಸಿ 68 ರನ್ ಗಳಿಸಲಷ್ಟೇ ಶಕ್ತವಾಯಿತು.

ಅಂತಿಮ ಹಣಾಹಣಿಯಲ್ಲಿ ರೋಚಕವಾಗಿತ್ತು. ಅಂತಿಮವಾಗಿ ಹಳೆ ಕೊಟ್ಟೂರು ಕ್ರಿಕೆಟರ್ಸ್ ಪಂದ್ಯವನ್ನು ಗೆಲ್ಲುವುದರ ಮೂಲಕ ವಿಜಯದ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತು.

ಕ್ರೀಡಾಂಗಣದಲ್ಲಿ ಕಿಕ್ಕಿರಿದ ಜನರಿಗೆ ರಸದೌತಣ ನೀಡಿದರು. ರನ್ನರ್ ಅಪ್ ಯುವ ಕ್ರಿಕೆಟರ್ಸ್ ತಂಡ ಕೊಟ್ಟೂರು, ಫೈನಲ್‌ನಲ್ಲಿ ಗೆಲುವನ್ನು ಸಾಧಿಸಿದ ಹಳೆ ಕೊಟ್ಟೂರು ,ಕಾಮಿಟ್ರಿ ಹೆಚ್. ರಾಕೀ, ಕೆ. ವಿರೂಪಕ್ಷಿ , ಮಂಜುನಾಥ್ ಸುಣಗಾರ್ , ದಾದಾಪೀರ್ ಮುರುಳಿ ಸರ್ವರು ಅಭಿನಂದನೆ ತಿಳಿಸಿದರು.

Leave a Reply

Your email address will not be published. Required fields are marked *