60 ಬೆಡ್ ತಾಯಿ ಮಕ್ಕಳ ಆಸ್ಪತ್ರೆ ಗೆ ಜಿಲ್ಲಾಧಿಕಾರಿಗಳು ದಿಡೀರ್ ಭೇಟಿ

Loading

ಹೊಸಪೇಟೆ : ದಿನಾಂಕ:13.11.2024 ರಂದು ಮಾನ್ಯ ಜಿಲ್ಲಾಧಿಕಾರಿಗಳು ಅನಿರೀಕ್ಷಿತವಾಗಿ, ಹೊಸಪೇಟೆ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ (MCH)ಗೆ ಭೇಟಿ ನೀಡಲಾಯಿತು, ಸಾರ್ವಜನಿಕರು ಆಸ್ಪತ್ರೆಯಲ್ಲಿನ ಕೆಲವು ಸಮಸ್ಯೆಗಳೊಂದಿಗೆ ನೀಡಿರುವ ದೂರಿನನ್ವಯ ಖುದ್ದು ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಗೆ ಈ ಕೆಳಕಂಡ ಸೂಚನೆಗಳನ್ನು ನೀಡಿದರು.

  1. ಆಸ್ಪತ್ರೆಗೆ ಭೇಟಿ ನೀಡುವ ಎಲ್ಲಾ ರೋಗಿಗಳೊಂದಿಗೆ ಹಾಗೂ ಅವರೊಂದಿಗೆ ಬಂದ ಪಾಲಕರೊಂದಿಗೆ ಗೌರವಯುತವಾಗಿ ಮಾತನಾಡಿಸುವಂತೆ/ ನಡೆದುಕೊಳ್ಳುವಂತೆ ಸೂಚಿಸಿದರು.
  2. ಆಸ್ಪತ್ರೆಗೆ ಬಂದ ಗರ್ಭಿಣಿ & ಬಾಣಂತಿಯರಿಗೆ ಯಾವುದೇ ಕಾರಣಕ್ಕೂ ತಪಾಸಣೆ ಅಥವಾ ಔಷಧ ಪಡೆಯುವ ವೇಳೆ ಸರತಿ ಸಾಲಿನಲ್ಲಿ ನಿಲ್ಲಿಸದಂತೆ ಪ್ರತ್ಯೇಕ ಟೋಕನ್ ವ್ಯವಸ್ಥೆ ಮಾಡುವಂತೆ ಸೂಚಿಸಲಾಯಿತು.
  3. Ultra sound Scanner ಉಪಕರಣವು ದುರಸ್ಥಿಯಲ್ಲಿದ್ದುದರಿಂದ ಉಪಯೋಗಿಸದೇ ಇಟ್ಟಿರುವುದನ್ನು ಗಮನಿಸಿ ತಕ್ಷಣೇ ಸದರಿ ಉಪಕರಣವನ್ನು ಸರಿಪಡಿಸಿ ಗರ್ಭಿಣಿಯರಿಗೆ ಉಚಿತವಾಗಿ Scanning ಮಾಡಲು ಈ ಸಂಬಂಧ ಗೋಡೆಯ ಮೇಲೆ ಎದ್ದು ಕಾಣುವ ರೀತಿಯಲ್ಲಿ ನಿಯಮಾನುಸಾರ ನಾಮಫಲಕಗಳನ್ನು ಅಳವಡಿಸುವಂತೆ ಸೂಚಿಸಲಾಯಿತು.
  4. ಈ ಹಿಂದೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉಪಯೋಗಿಸದೇ ಖಾಲಿ ಇದ್ದ ಕೊಠಡಿಗಳಿಗೆ Air Conditioner ಗಳನ್ನು ಅಳವಡಿಸುವಂತೆ ಹಾಗೂ ಸುಸಜ್ಜಿತವಾಗಿಟ್ಟುಕೊಳ್ಳುವಂತೆ ತಿಳಿಸಲಾಗಿತ್ತು ಸದರಿ ನಿರ್ದೇಶನದಂತೆ ಖಾಲಿ ಇದ್ದ ಕೊಠಡಿಗಳಲ್ಲಿ ರೋಗಿಗಳ ಶಸ್ತ್ರ ಚಿಕಿತ್ಸೆಯ ನಂತರ Air Conditioner ಕೊಠಡಿಗಳಲ್ಲಿ ಆರೋಗ್ಯೋಪಚಾರ ಪಡೆಯಲು ಕ್ರಮವಹಿಸಲು ಸೂಚಿಸಲಾಯಿತು.
  5. ಒಂದು ವೇಳೆ ಕೆಲವು ಔಷಧಿಗಳು ಆಸ್ಪತ್ರೆಯಲ್ಲಿ ಲಭ್ಯವಿಲ್ಲದಿದ್ದಲ್ಲಿ ಕೂಡಲೇ ಸದರಿ ಔಷಧಿಗಳನ್ನು ಖರೀದಿಸಿ ರೋಗಿಗಳಿಗೆ ಉಚಿತವಾಗಿ ನೀಡಲು ಕ್ರಮವಹಿಸುವಂತೆ ಸೂಚಿಸಲಾಯಿತು. ಯಾವುದೇ ಕಾರಣಕ್ಕೂ ರೋಗಿಗಳಿಗೆ ಔಷಧಿಗಳನ್ನು ಹೊರಗಡೆ ಖರೀದಿಸಲು ಬರೆಯದಿರಲು ಅಥವಾ Scanningಗಾಗಿ ಹೊರಗಡೆ ಕಳುಹಿಸದಿರಲು ಕ್ರಮವಹಿಸುವಂತೆ ಸೂಚಿಸಲಾಯಿತು.
  6. ಆಸ್ಪತ್ರೆಯನ್ನು ಸ್ವಚ್ಚತೆಯಿಂದ ಕಾಪಾಡಿಟ್ಟುಕೊಂಡಿರುವುದರಿಂದ ಅಧಿಕಾರಿಗಳು ಹಾಗೂ ಆಸ್ಪತ್ರೆಯ ಸಿಬ್ಬಂಧಿಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು.
  7. ಆಸ್ಪತ್ರೆಯಲ್ಲಿ ಹೆರಿಗೆಯ ನಂತರ ಪಾಲಕರು Birth Certificate ಪಡೆಯುವ ಸಂಬಂಧ ಸರ್ವರ್ ಸಮಸ್ಯೆಗಳಿಂದಾಗಿ Generate ಆಗದೇ ಸುಮಾರು ಮೂರು ತಿಂಗಳಿನಿಂದ ಬಾಕಿ ಇದ್ದು ಸದರಿ ಪ್ರಮಾಣ ಪತ್ರಗಳನ್ನು ಪಡೆಯಲು ಸಾರ್ವಜನಿಕರು ಅಲೆದಾಡುತ್ತಿದ್ದುದರಿಂದ ಸರ್ವರ್ ಸಮಸ್ಯೆ ಬಗೆಹರಿದ ನಂತರ ಎಲ್ಲಾ ಪಾಲಕರುಗಳ ವಿಳಾಸಕ್ಕೆ ಪೋಸ್ಟ ಮೂಲಕ ಕಳುಹುಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು, ಕಾರಣ ಸದರಿ Birth Certificate ಪ್ರಮಾಣ ಪತ್ರಕ್ಕಾಗಿ ಆಸ್ಪತ್ರೆಗೆ ವಿನಾಃ ಕಾರಣ ಅಲೆದಾಡದಿರಲು ಅಲ್ಲಿನ ಸಾರ್ವಜನಿಕರಿಗೆ ಸೂಚಿಸಲಾಯಿತು.
  8. ಸಾರ್ವಜನಿಕ ರೋಗಿಗಳ ಬೇಡಿಕೆಯಂತೆ ಆಸ್ಪತ್ರೆಯ ಹೊರಗಡೆ ಆಸನದ ವ್ಯವಸ್ಥೆಯನ್ನು ಕೂಡಲೇ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Leave a Reply

Your email address will not be published. Required fields are marked *