
ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಲೂಕಿನ ಗುಡೆಕೋಟೆ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಅಪ್ಪೇನಳ್ಳಿ ಗ್ರಾಮ ಪಂಚಾಯಿತಿಯ ಅಪ್ಪೆನಹಳ್ಳಿ ಹಾಗೂ ಮಹದೇವಪುರ ಗ್ರಾಮಗಳಲ್ಲಿ ಮಂಗಳವಾರ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಗ್ರಾಮಗಳ ಪಕ್ಕದಲ್ಲಿ ಇರುವಂತಹ ಗುಡ್ಡ ದ ನೀರು ಇಳಿಜಾರಿನ ಪ್ರದೇಶದ ಪಕ್ಕದಲ್ಲಿ ಚಿಕ್ಕ ಕೆರೆದಂತಿರುವ ನೀರಿನ ಹೊಂಡವು ಅಪಾರ ನೀರಿನಿಂದ ತುಂಬಿ ಹೊಡೆದ ಪರಿಣಾಮವಾಗಿ ಪಕ್ಕದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಗ್ರಾಮದ ತುಂಬೆಲ್ಲ ಮನೆಗಳಿಗೆ ನೀರು ತುಂಬಿದ ಪರಿಣಾಮ ಮಕ್ಕಳು, ಮಹಿಳೆಯರು, ಗರ್ಭಿಣಿ ಸ್ತ್ರೀಯರು, ವೃದ್ಧರು, ಹೀಗೆ ಅನೇಕ ಜನರು ಆತಂಕಗೋಳಗಾಗಿದ್ದಾರೆ,
ಕೆರೆಗುಂಟೆ ಹೊಡೆದು 24 ಗಂಟೆಗಳು ಸಮಯ ಕಳೆದರು ಯಾವ ಅಧಿಕಾರಗಳು ಗ್ರಾಮಕ್ಕೆ ಬಾರದೆ ನೀರು ನುಗ್ಗಿದ
ಅನೇಕ ಮನೆಗಳಲ್ಲಿ ಗುಡಿಸಲುಗಳಲ್ಲಿ ಅಪಾರ ಮಟ್ಟದ ನೀರು ತುಂಬಿರುವುದರಿಂದ ಜನರು ತಮ್ಮ ತಮ್ಮ ಮನೆಗಳಲ್ಲಿ ಜೀವನ ಮಾಡಲಿಕ್ಕೆ ಬೇಕಾದಂತಹ ಆಹಾರ ಪದಾರ್ಥಗಳು ಹಾಗೂ ಕಾಳು, ಕಡಿ, ಬಟ್ಟೆ, ಟಿವಿ ಇನ್ನಿತರ ಅನೇಕ ವಸ್ತುಗಳು, ಮಿಷನರಿ ಯಂತಹ ಸಾಮಾನುಗಳು ನೀರು ನುಗ್ಗಿ ಪರಿಣಾಮ ಹಾನಿ ಹಾಗೂ ನಷ್ಟಕ್ಕೆ ಒಳಗಾಗಿದ್ದಾರೆ, ಈ ಗ್ರಾಮದ ಜನರಿಗೆ ಕೂಡಲು ಜಾಗವಿಲ್ಲದೆ ಮಲಗಲು ಸ್ಥಳವಿಲ್ಲದೆ ಪ್ರಕೃತಿಯ ವಿಕೋಪದಿಂದ ಬೀದಿ ಪಾಲಾಗಿರುವಂತಹ ಜನರ ಸ್ಥಿತಿ ಬಹಳ ಚಿಂತಾ ಜನಕವಾಗಿದೆ,

ಈ ವಿಷಯ ತಾಲೂಕು ಮಟ್ಟದ ಎಲ್ಲಾ ಅಧಿಕಾರಿ ವರ್ಗದವರಿಗೂ ತಿಳಿದರೂ ಸಹ ಜನರ ಗೋಳನ್ನು ಕೇಳದೆ ಸಂಕಷ್ಟಗಳನ್ನು ಹರಿಯದೆ ಇರುವಂತಹ ಅಧಿಕಾರಿಗಳ ಬಂಡತನದ ನಿರ್ಲಕ್ಷತನ ಇಲ್ಲಿ ಎದ್ದು ಕಾಣುತ್ತಿದೆ ಎನ್ನುವುದನ್ನು ಜನರು ಅಧಿಕಾರಿ ವರ್ಗಕ್ಕೆ ಇಡಿ ಶಾಪ ಹಾಕುತ್ತಿದ್ದಾರೆ.
ನಮ್ಮ ಸುದ್ದಿ ವಾಹಿನಿಯು ಅಪ್ಪೇನಳ್ಳಿ ಹಾಗೂ ಮಹದೇವಪುರ ಗ್ರಾಮಕ್ಕೆ ಜನರ ಹತ್ತಿರ ಹೋಗಿ ಕೇಳಿದರೆ ಜನರು ಅಧಿಕಾರಿಗಳ ಹೇಳುತ್ತಿರುವುದು ಕೇಳಿದಾಗ ನಾವು ಕೆಲವು ಅಧಿಕಾರಿಗಳಿಗೆ ಫೋನ್ ಕರೆ ಮೂಲಕ ಮಾತನಾಡಿದಾಗ ಬುಧವಾರ ಸಂಜೆ 4 ಘಂಟೆ ಸಮಯಕ್ಕೆ ಗ್ರಾಮಕ್ಕೆ ತಾಲೂಕು ತಹಶೀಲ್ದಾರ್ ಹಾಗೂ ಕಾರ್ಯನಿರ್ವಕ ಅಧಿಕಾರಿಗಳು ವೀಕ್ಷಣೆ ದಾವಿಸಿದ್ದಾರೆ, ಎಂಬುದು ತಿಳಿದು ಬಂದಿದೆ
ಜನರ ಸಂಕಷ್ಟಗಳು ಜನರು ಹೇಳಿರುವ ದೃಶ್ಯಗಳ ಮೂಲಕ ವೀಕ್ಷಕರು ನೋಡಬಹುದು
ಅದು ಏನೇ ಇರಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವಂತಹ ಈ ಗ್ರಾಮಗಳಿಗೆ ಜನರಿಗೆ ರಕ್ಷಣೆ ಹಾಗೂ ಸುರಕ್ಷತೆಯನ್ನು ಕಾಪಾಡುವ ಹೊಣೆ ಸರ್ಕಾರದ್ದು ಸರ್ಕಾರದ ಅಧಿಕಾರಿಗಳು ಬೇಗನೆ ಈ ಗ್ರಾಮಗಳ ಜನಗಳಿಗೆ ಮಲಗಲಿಕ್ಕೆ ಸ್ಥಳಾವಕಾಶ ಹಾಗೆ ಹೊಟ್ಟೆಗೆ ಗಂಜಿ ಕೇಂದ್ರವಾದರೂ ತೆರೆದು ಮನುಷ್ಯನಿಗೆ ಬೇಕಾದಂತ ಪ್ರಥಮ ಹಂತದ ಸೌಕರ್ಯಗಳನ್ನಾದರೂ ಒದಗಿಸಲಿ ಎಂಬುವುದು ನಮ್ಮ ಸಾಮಾಜಿಕ ಕಾಳಜಿಯಾಗಿದೆ.
ಈ ಗ್ರಾಮಗಳಲ್ಲಿ ಅಪಾರ ಜನರಿಗೆ ಊಟಕ್ಕೂ ತೊಂದರೆ ಆಗಿರುವ ಪರಿಸ್ಥಿತಿಯನ್ನು ಕಾಣಬಹುದು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳು ಹಾಗೂ ತಾಲೂಕ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಶಾಸಕರು ಇವರ ಪರಿಸ್ಥಿತಿಗೆ ಸ್ಪಂದಿಸಿದ ಬೇಕಾಗಿದೆ
ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿಗಿ