ಕವನದ ಶೀರ್ಷಿಕೆ:—ನಿನ್ನ ನಂಬಿ ಬಂದಿನಿ ಗೆಳತಿ

Loading

ನಿನ್ನ ನಂಬಿ ಬಂದಿನಿ ಗೆಳತಿ
ನನ್ನ ಜೀವಕ್ಕೆ ನೀನೆ ಒಡತಿ

ಕಂಗಳಲಿ ನೋವ ತುಂಬಿ
ಬಾಳಲಿ ನಿನ್ನ ನಂಬಿ
ಬಾಳ ಬಡಿಯಂತೆ ಸಿಹಿಜೇನಿನಂತೆ
ಕಷ್ಟವು ಮರೆತು ಸುಖವ ತಂದಿರುವೆ

ನೆನಪುಗಳ ಆಗರ
ಕನಸುಗಳ ಸಾಗರ
ಕಡಲ ಅಲೆಗಳ ದಾಟಿ
ಮಡಲ ಪ್ರೀತಿಯ ಮೀಟಿ
ನಿನ್ನಲಿ ಒಂದಾಗಿರುವೆ

ಹಾಲಿನಂಥ ನಿನ್ನ ಪ್ರೀತಿ
ವಿಷವಾಯಿತಲ್ಲ
ಜೇನಿನಂಥ ನಿನ್ನ ಮಾತು
ಹಗೆಯಾಯಿತಲ್ಲ

ಹರಿಯುವ ಝರಿಯಂತೆ
ಸುರಿಸುವ ಮಳೆಯಂತೆ
ಚಲಿಸುವ ತಾರೆಯಂತೆ
ಕರಗುವ ಹನಿಯಂತೆ
ಬಾಳಲಿ ನೀನು ಬಂದು
ಏಕೆ ದೂರಾಗಿರುವೆ

ಬರಹ : ಕ್ಯಾದಿಗೆಹಾಳ್ ಉದೇದಪ್ಪ ಶಿಕ್ಷಕರು
ಹಾಗೂ ಸಾಹಿತಿಗಳು
ಪಿ.ವಿ.ಎಸ್.ಬಿ.ಸಿ ಪ್ರೌಢ ಶಾಲೆ
ಹೊಸಪೇಟೆ

Leave a Reply

Your email address will not be published. Required fields are marked *