
ಕೊಟ್ಟೂರು : ಪಟ್ಟಣದ ಕೊಟ್ಟೂರೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗ ಮತ್ತು ಐಕ್ಯೂ ಎಸಿ ಸಹಯೋಗದೊಂದಿಗೆ introduction to phonetics and linguistics ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮವನ್ನು ಪ್ರಾಚಾರ್ಯರಾದ ಡಾ. ಎಂ ರವಿಕುಮಾರ್ ಅವರು ಇಂಗ್ಲೀಷ್ ಭಾಷೆ ಕಬ್ಬಿಣದ ಕಡೆಲೆಯೆಲ್ಲ ಎಂದು ವಿಷಯ ತಿಳಿಸುವುದರೊಂದಿಗೆ ಇಂಗ್ಲಿಷ್ ಭಾಷೆ ಸುಲಭವೆಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ಚಾಂದ್ ಭಾಷಾ ಸರ್ ರವರು English is not a difficult subject but it is a different subject. ಎಂದು ತಿಳಿಸಿದರು ಮುಂದುವರೆದು ಫೋನಿಟಿಕ್ಸ್ ಅಂಡ್ ಲಿಂಗ್ವೆಸ್ಟಿಕ್ಸ್ ವಿಷಯದ ಬಗ್ಗೆ ಹಾಗೂ ಕಾಂಪೊನೆಂಟ್ಸ್ ಆಫ್ ಲಾಂಗ್ವೇಜ್ ಸ್ಟ್ರಕ್ಚರ್ ಆಫ್ ಲಾಂಗ್ವೇಜ್ ಅಂಡ್ ಇಂಟೋನೇಶನ್ ಗಳ ಬಗ್ಗೆ ವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ವಿವರಿಸದರು.

ಈ ಕಾರ್ಯಕ್ರಮವನ್ನು ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಕೆ.ಎಚ್. ಎಂ.ಕರಿಬಸವ ಸ್ವಾಮಿ ಹಾಗೂ ಇತರ ಉಪನ್ಯಾಸಕರು ಅಚ್ಚುಕಟ್ಟಾಗಿ ಆಯೋಜಿಸಿದ್ದರು ವಿದ್ಯಾರ್ಥಿನಿ ಐಶ್ವರ್ಯ ಸ್ವಾಗತಿಸಿದರು ಹಾಗೂ ಪ್ರಾರ್ಥನ ಗೀತೆಯನ್ನು ವಿದ್ಯಾರ್ಥಿನಿ ಅಕ್ಕಮ್ಮ ಅವರು ಹಾಡಿದರು ಹಾಗೂ ವಿಭಾಗದ ಉಪನ್ಯಾಸಕರಾದ ಶ್ರೀ ಬಸವರಾಜ್ ಡಿ ಜಿ ಅವರು ನಿರೂಪಿಸಿ ಹಾಗೂ ವಂದಿಸಿದರು.
ಹಾಗೆಯೇ ಈ ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಜೆ ಬಿ ಸಿದ್ದನಗೌಡ ,ಐ ಕ್ಯು ಎ ಸಿ ಸಂಚಾಲಕರಾದ ಡಾ.ಪೃಥ್ವಿರಾಜ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೆ.ಪಿ. ರಾಧಾಸ್ವಾಮಿ,ದೈಹಿಕ ಶಿಕ್ಷಣ ನಿರ್ದೇಶಕರಾದ ಶಿವಕುಮಾರ್, ಅರ್ಥಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಕೆ ಉಮೇಶ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಕೆ ಎಂ ವೀರೇಶ್,
ಉಪನ್ಯಾಸಕರಾದ ಓ ಶಿವಪ್ರಕಾಶ, ಮೈಲಾರ ಗೌಡ್ರು, ಹನುಮಂತಪ್ಪ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.