
ಒಲಿಂಪಿಕ್ಸ್ :10ಮೀ ಎರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಭಾರತದ ಮನು ಭಾಕರ್ 221.7 ಗುರಿ ಸಾಧಿಸುವ ಮೂಲಕ ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದರಿಂದಾಗಿ ಭಾರತದ ಪದಕ ಬೇಟೆ ಆರಂಭವಾದಂತಾಗಿದೆ. ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಕೋರಿಯಾ ಪಡೆದುಕೊಂಡಿದೆ. ಈ ಮೂಲಕ ಮನು ದೇಶದ ಗೌರವನ್ನು ಹೆಚ್ಚಿಸಿದ್ದಾರೆ.