ಹೊಸಪೇಟೆ (ವಿಜಯನಗರ) : ದೌರ್ಜನ್ಯಗೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಸೇವೆ, ಪೋಲಿಸ್ ಸೇವೆ, ಕಾನೂನು ಸೇವೆ, ಸಮಾಲೋಚನೆ ಮತ್ತು ತಾತ್ಕಾಲಿಕ ವಸತಿ ಒದಗಿಸುವ ಕುರಿತು “ಸಖಿ”ಒನ್ ಸ್ಟಾಪ್ ಸೆಂಟರ್ ಕೇಂದ್ರ ಸರ್ಕಾರದ ಯೋಜನೆಯನ್ನು ಅನುಷ್ಠಾನಗೊಳಿಸಲು ಸಿಬ್ಬಂದಿಗಳನ್ನು ಸೇವಾ ಒಪ್ಪಂದದ ಮೇಲೆ ಭರ್ತಿ ಮಾಡಲಾಗುತ್ತದೆ.
ಅದರಂತೆ ವಿಜಯನಗರ ಜಿಲ್ಲೆಯಲ್ಲಿ “ಸಖಿ”ಒನ್ ಸ್ಟಾಪ್ ಸೆಂಟರ್ ಅನುಷ್ಠಾನಗೊಳಿಸಲು ತಾತ್ಕಾಲಿಕವಾಗಿ 4 ಹುದ್ದೆಗಳನ್ನು ಗೌರವಧನ ಆಧಾರದಲ್ಲಿ ಭರ್ತಿ ಮಾಡಬೇಕಿದೆ.
ಆಪ್ತಸಮಾಲೋಚಕರು 1 ಹುದ್ದೆ: ಸಮಾಜ ಕಾರ್ಯದಲ್ಲಿ ಪದವಿ, ಪೋಷಣೆ, ಮೇಡಿಸಿನ್, ಹೋಮ್ಸೈನ್ಸ್, ಸೈಕಾಲಜಿ, ಮನೋವೈದ್ಯಶಾಸ್ತç ಮತ್ತು ಕಂಪ್ಯೂಟರ್ ಜ್ಞಾನ ಉಳ್ಳವರಾಗಿರಬೇಕು, ಸಮಾಲೋಚಕರಾಗಿ 3 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.
ಕಾನೂನು ಸಲಹೆಗಾರರು 2 ಹುದ್ದೆ: ಕಾನೂನು ವಿಷಯದಲ್ಲಿ ಪದವಿ ಪಡೆದಿರಬೇಕು. 2, 3 ವರ್ಷ ಅನುಭವವನ್ನು ಹೊಂದಿರಬೇಕು. ಭದ್ರತಾ ಸಿಬ್ಬಂದಿ 1 ಹುದ್ದೆ: ಸಹಾಯಕರಾಗಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ವಿದ್ಯಾರ್ಹತೆ, ಹೆಚ್ಚುವರಿ ಅರ್ಹತೆಗಳು, ಅನುಭವ ಹಾಗೂ ಉಸ್ತುವಾರಿಯಲ್ಲಿ ಉತ್ತಮ ಕೆಲಸ ನಿರ್ವಹಿಸಬಲ್ಲ, ತರಬೇತಿಗಳನ್ನು ಹಮ್ಮಿಕೊಳ್ಳಲು ಸಮರ್ಥ, ಕೌಶಲ್ಯ ಹೊಂದಿರುವ, ಗಣಕಯಂತ್ರ ನಿರ್ವಹಣೆಯಲ್ಲಿ ಪರಿಣಿತಿ, ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪರಿಪೂರ್ಣ ಹಿಡಿತವುಳ್ಳ ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನಕ್ಕೆ ಆಹ್ವಾನಿಸಿ ಸಂದರ್ಶನ ಮತ್ತು ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳು, ಅನುಭವ, ಕಂಪ್ಯೂಟರ್ ಪರೀಕ್ಷೆಗಳ ಮೂಲಕ ತಾತ್ಕಾಲಿಕವಾಗಿ 4 ಹುದ್ದೆಗಳನ್ನು ಗೌರವಧನ ಆಧಾರದಲ್ಲಿ ನೇಮಕಾತಿಗೊಳಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಕೆಗೆ ಜುಲೈ 10 ಕೊನೆಯ ದಿನವಾಗಿರುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ನೇರವಾಗಿ ಕಚೇರಿಗೆ ಸಲ್ಲಿಸಬಹುದಾಗಿದೆ.
ಸಲ್ಲಿಸಬೇಕಾದ ದಾಖಲೆಗಳು: ನಿಗದಿತ ನಮೂನೆಯಲ್ಲಿ ಅರ್ಜಿ, ಜನ್ಮ ದಿನಾಂಕದ ದೃಢೀಕರಣಕ್ಕಾಗಿ ಎಸ್.ಎಸ್.ಎಲ್.ಸಿ ಅಂಕ ಪಟ್ಟಿ / ಶಾಲಾ ವರ್ಗಾವಣೆ ಪತ್ರ, ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯ ಅಂಕಪಟ್ಟಿಗಳು, ಅನುಭವ ಪ್ರಮಾಣ ಪತ್ರಗಳು, ಕಂಪ್ಯೂಟರ್ ತರಬೇತಿ ಪಡೆದಿರುವ ಬಗ್ಗೆ ಪ್ರಮಾಣ ಪತ್ರ.
ವಿಶೇಷ ಸೂಚನೆಗಳು: “ಸಖಿ” ಯೋಜನೆಯಡಿ ಮಹಿಳೆಯರಿಗೆ ಮಾತ್ರ. ಸದರಿ ಮೇಲಿನ ಹುದ್ದೆಗಳು ಸೇವಾ ಒಪ್ಪಂದ/ ಗೌರವ ಸೇವೆಯ ಆಧಾರದಲ್ಲಿ ಇರುತ್ತವೆ. ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಅಂಗೀಕೃತ ಕಾಲೇಜು/ವಿಶ್ವ ವಿದ್ಯಾಲಯಗಳಿಂದ ಶಿಕ್ಷಣ ಪಡೆದಿರಬೇಕು. ಅಭ್ಯರ್ಥಿಗಳ ಆಯ್ಕೆಯು ತಾತ್ಕಾಲಿಕವಾಗಿರುತ್ತದೆ.
ಸದರಿ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಕನ್ನಡ ಮತ್ತು ಇಂಗ್ಲೀಷ್ ಜ್ಞಾನ ಅಗತ್ಯವಾಗಿರುತ್ತದೆ. ಸದರಿ ನೇಮಕಾತಿಯು 11 ತಿಂಗಳ ಅವಧಿಯಾಗಿದ್ದು, ಕೆಲಸ ನಿರ್ವಹಣೆಯ ಆಧಾರದ ಮೇರೆಗೆ ಹುದ್ದೆಯನ್ನು ಜಿಲ್ಲಾ ಸಮಿತಿ ಅನುಮೋದನೆ ಮೇರೆಗೆ ಮುಂದಿನ ಅವಧಿಗೆ ಮುಂದುವರೆಸಬಹುದಾಗಿರುತ್ತದೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ಮೇಲಿನ ಹುದ್ದೆಗಳ ಕರ್ತವ್ಯದಲ್ಲಿ ದಿನದ 24 ತಾಸು ಕಾರ್ಯನಿರ್ವಹಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಪ್ತಗಿರಿ ಶಾಲೆಯ ಹತ್ತಿರ ಮೆಟ್ರೋ ಫ್ಯಾಶನ್ ಮೇಲಿನ ಮಹಡಿ ಬಸವೇಶ್ವರ ಬಡಾವಣೆ ವಿಜಯನಗರ ಮೊ.9742064639, 9980996075ಗೆ ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ವೇತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.