ಮಹಿಳೆ ಕಾಣೆ: ಪ್ರಕರಣ ದಾಖಲು

Loading

ಹೊಸಪೇಟೆ (ವಿಜಯನಗರ) : ಆದಾರ್ ಕಾರ್ಡ್ ಮಾಡಿಸುತ್ತೇನೆಂದು ಹೇಳಿ ಹೊರಗೆ ಹೋದ ಹೊಸಪೇಟೆ ತಾಲೂಕಿನ ಗಾದಿಗನೂರಿನ ಮಹಿಳೆ ಪಾರ್ವತಿ (28) ಇವರು ಕಾಣೆಯಾದ ಬಗ್ಗೆ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಗುನ್ನೆ ನಂ.-138/2024 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


ಚಹರೆ: ಕಾಣೆಯಾದ ಪಾರ್ವತಿ ಅವರು 5-3 ಅಡಿ ಎತ್ತರ, ಕಪ್ಪು ಮೈಬಣ್ಣ, ಮೀಡಿಯಂ ದಪ್ಪ, ದುಂಡು ಮುಖ, ಮುಖದಲ್ಲಿ ಅಲ್ಲಲ್ಲಿ ಗುಳ್ಳೆಗಳು ಇರುತ್ತವೆ. ಮನೆಯಿಂದ ಹೋಗುವಾಗ ಕೆಂಪು ಸೀರೆ ಧರಿಸಿರುತ್ತಾಳೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾಳೆ.
ಈ ಯುವತಿಯ ಬಗ್ಗೆ ಮಾಹಿತಿ ಕಂಡುಬAದಲ್ಲಿ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ದೂ:228233(08394) ಎಸ್.ಎಚ್.ಓ, ಹೊಸಪೇಟೆ ಕಂಟ್ರೋಲ್ ರೂಮ್ 9480805700, ಗ್ರಾಮೀಣ ಪೋಲಿಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ 9480805746ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *