ಗಂಡಸಿನ ಶವ ಪತ್ತೆ: ವಾರಸುದಾರರ ಪತ್ತೆಗೆ ಮನವಿ

Loading

ಹೊಸಪೇಟೆ (ವಿಜಯನಗರ) : ಹಂಪಿಯ ತುಂಗಾಭದ್ರ ನದಿಯ ಸ್ನಾನ ಘಟ್ಟದ ಹತ್ತಿರ ತುಂಗಭದ್ರ ನದಿ ನೀರಿನಲ್ಲಿ ಸುಮಾರುs 25 ರಿಂದ 30 ವರ್ಷದ ಒಂದು ಅಪರಿಚಿತ ಅನಾಮಧೇಯ ಗಂಡಸಿನ ಶವವು ಪತ್ತೆಯಾದ ಬಗ್ಗೆ ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ (ಯು.ಡಿ.ಆರ್ ನಂಬರ್ 05/2024 ಕಲಂ 174 ಸಿ.ಆರ್.ಪಿ.ಸಿ ಅಡಿ) ಪ್ರಕರಣ ದಾಖಲಾಗಿದೆ.


ಮೃತ ವ್ಯಕ್ತಿಯ ಮೈಮೇಲೆ ಅರಿಶಿಣ ಬಣ್ಣದ ಡಿಎಸ್ಪಿ ಗೋಲ್ಡ್ ಕಂಪನಿಯ ಒಳ ಉಡುಪು ಇರುತ್ತದೆ. ಎರಡು ಕಣ್ಣುಗಳ ಮುಚ್ಚಿರುತ್ತವೆ. ಮೂಗಿನಲ್ಲಿ ರಕ್ತವು ಹರಿದಿರುತ್ತದೆ. ಅಲ್ಲಲ್ಲಿ ಜಲ ಚರ ಪ್ರಾಣಿಗಳು ತಿಂದAತೆ ಕಂಡು ಬರುತ್ತದೆ. ಮೃತ ದೇಹವು ಕೊಳೆತ ಸ್ಥಿತಿಯಲ್ಲಿದೆ. ಸುಮಾರು 2-3 ದಿನಗಳ ಹಿಂದೆ ಟಿಬಿ ಡ್ಯಾಂನ ತುಂಗಾಭದ್ರಾ ನದಿಯ ಸ್ಥಳದಿಂದ ಹಂಪಿಯ ತುಂಗಾಭದ್ರಾ ನದಿಯ ವರೆಗೆ ಮಧ್ಯದ ಯಾವುದೋ ಸ್ಥಳದಲ್ಲಿ ಯಾವುದೋ ಕಾರಣಗಳಿಗಾಗಿ ಅಥವಾ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮೃತಪಟ್ಟಂತೆ ಕಂಡುಬರುತ್ತಿದೆ.


ಮೃತನ ಚಹರೆ: ವಯಸ್ಸು ಅಂದಾಜು 25ರಿಂದ 30 ವರ್ಷ, ಬಣ್ಣ ಚರ್ಮ ಕೊಳೆತು ಹೋಗಿದೆ. 5.6 ಅಡಿ ಎತ್ತರ, ಮೈಮೇಲೆ ಅರಿಶಿಣ ಬಣ್ಣದ ಡಿಎಸ್ಪಿ ಗೋಲ್ಡ್ ಕಂಪನಿಯ ಒಳ ಉಡುಪು ಇರುತ್ತದೆ. ಈ ಮೃತ ವ್ಯಕ್ತಿಯ ಬಗ್ಗೆ ಗುರುತು ಹಾಗೂ ವಾರಸುದಾರರು ಪತ್ತೆಯಾದಲ್ಲಿ ಹಂಪಿ ಪ್ರವಾಸಿ ಪೊಲೀಸ್ ಠಾಣೆಯ ಡಿ.ಎಸ್.ಪಿ ಹೊಸಪೇಟೆ ದೂ ಸಂ: 08394-24204, ಸಿಪಿಐ ಕಚೇರಿ ಹಂಪಿ ದೂ ಸಂ: 08394-241530, ಪಿಎಸ್‌ಐ ಹಂಪಿ ಪ್ರವಾಸಿ ಠಾಣೆ ದೂ.ಸಂ: 08394-241530, ಮೊಬೈಲ್ ನಂ 9480805758 ಇವರಿಗೆ ಮಾಹಿತಿ ನೀಡಲು ಹಂಪಿ ಪ್ರವಾಸಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *