ಬಳ್ಳಾರಿ (ವಿಜಯನಗರ) ಜೂನ್ 11 : ಬಳ್ಳಾರಿ ರೈಲು ನಿಲ್ದಾಣದ ಬುಕ್ಕಿಂಗ್ ಕೌಂಟರ್ ಮುಂದೆ ಅರೆಪ್ರಜ್ಞಾಹೀನನಾಗಿ ಬಿದ್ದಿದ್ದ ವ್ಯಕ್ತಿಯು ಚಿಕಿತ್ಸೆ ಫಲಿಸದೇ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಮೃತ ಪಟ್ಟ ಬಗ್ಗೆ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ (ಯು.ಡಿ.ಆರ್ ನಂಬರ್ 25/2024 ಕಲಂ 174 ಸಿ.ಆರ್.ಪಿ.ಸಿ ಅಡಿ) ಪ್ರಕರಣ ದಾಖಲಾಗಿದೆ.
ಮೃತನ ಚಹರೆ: ಎತ್ತರ 5.6 ಅಡಿ, ಕೋಲು ಮುಖ, ಬಡಕಲು ದೇಹ, ಗೋಧಿ ಮೈ ಬಣ್ಣ, ದಪ್ಪ ಮೂಗು, ತಲೆಯಲ್ಲಿ ಸುಮಾರು 3 ಇಂಚು ಬಿಳಿ ಮಿಶ್ರಿತ ಕಪ್ಪು ಕೂದಲು, 1 ಇಂಚು ಬಿಳಿಯ ಮಿಶ್ರಿತ ಕಪ್ಪು ಮೀಸೆ ಹಾಗೂ ಗಡ್ಡ ಬಿಟ್ಟಿರುತ್ತಾನೆ.
ಮೃತನ ಮೈ ಮೇಲಿನ ಬಟ್ಟೆ : ಒಂದು ನೀಲಿ ಬಣ್ಣದ ತುಂಬುತೋಳಿನ ರೆಡಿಮೇಡ್ ಜೀನ್ಸ್ ಶರ್ಟ್, ಒಂದು ನೀಲಿ ಬಣ್ಣದ ಕ್ರೇಜ್ ಸ್ಮಾರ್ಟ್ ಕಂಪನಿಯ ಅಂಡರ್ವೇರ್, ಒಂದು ಬಳಿ ಬಣ್ಣದ ಲುಂಗಿ ಧರಿಸಿರುತ್ತಾನೆ.
ಈ ಮೃತ ವ್ಯಕ್ತಿಯ ಬಗ್ಗೆ ಗುರುತು ಹಾಗೂ ವಾರಸುದಾರರು ಪತ್ತೆಯಾದಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ದೂ.ಸಂ:9480802131, ರಾಯಚೂರು ರೈಲ್ವೆ ಪೊಲೀಸ್ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರು ದೂ. ಸಂ: 9480800471 ಇವರಿಗೆ ಮಾಹಿತಿ ನೀಡಲು ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.