
ಹೊಸಪೇಟೆ (ವಿಜಯನಗರ) : ಹೊಸಪೇಟೆಯ ಶ್ರೀಶಂಕರ್ ಆನಂದ್ಸಿAಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿ ಪ್ರವೇಶಾತಿ ಪ್ರಾರಂಭವಾಗಿದ್ದು, ಎಲ್ಲಾ ಪಿಯುಸಿ, ಡಿಪ್ಲೋಮಾ, ಐಟಿಐ ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.
ಬಿಎ ಕಲಾ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತç, ರಾಜ್ಯಶಾಸ್ತç, ಸಮಾಜಶಾಸ್ತç, ಕನ್ನಡ, ಶಿಕ್ಷಣಶಾಸ್ತç, ಇಂಗ್ಲಿಷ್, ಪತ್ರಿಕೋಧ್ಯಮ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಓದಲು ಅವಕಾಶವಿರುತ್ತದೆ. ಅದೇ ರೀತಿ ಬಿಎಸ್ಸಿ ವಿಜ್ಞಾನ ವಿಭಾಗದಲ್ಲಿ ಪಿಜಿಕ್ಸ್, ಕೆಮಿಸ್ಟಿç, ಮ್ಯಾಥ್ಸ್, ಬಾಟನಿ, ಜಿಯೋಲಜಿ, ಕಂಪ್ಯೂಟರ್ ಸೈನ್ಸ್ ವಿಷಯ ಓದಲು ಅವಕಾಶವಿರುತ್ತದೆ. ಅದೇ ರೀತಿ ಬಿಕಾಂ ಮತ್ತು ಬಿಸಿಎ ಓದಲು ಕೂಡ ಅವಕಾಶವಿರುತ್ತದೆ.
ಸದ್ಯ ಈ ಕಾಲೇಜಿನಲ್ಲಿ ಸುಮಾರು 3000 ವಿದ್ಯಾರ್ಥಿಗಳು ಪದವಿ ಕೋರ್ಸ್ಗಳಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಕಾಲೇಜು ಸುಸಜ್ಜಿತ ಕಟ್ಟಡ ಹೊಂದಿದ್ದು, ಹಲವಾರು ಸೌಲಭ್ಯಗಳನ್ನು ಅನೇಕ ವರ್ಷಗಳಿಂದ ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ. ಕಾಲೇಜಿನಲ್ಲಿ ಡಿಜಿಟಲ್ ಲೈಬ್ರರಿ ಮತ್ತು 19000 ಸಾವಿರ ಪುಸ್ತಕಗಳಿವೆ. ಕೊಠಡಿಗಳಲ್ಲಿ ವಿಡಿಯೋ ಪ್ರೊಜೆಕ್ಟರ್ ಮತ್ತು ಸ್ಮಾರ್ಟ್ ಕ್ಲಾಸ್ ರೂಮ್ ಪರಿಕರಗಳಿವೆ. ಅತ್ಯಾಧುನಿಕ ಕಂಪ್ಯೂಟರಗಳು ಮತ್ತು ಲೇಟೆಸ್ಟ್ ಸಾಪ್ಟವೇರ್ ಲ್ಯಾಬ್ ಸೇರಿದಂತೆ ಅನೇಕ ಸೌಕರ್ಯಗಳಿವೆ.
ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಪ್ರಾಂಶುಪಾಲರು ಪ್ರೊ.ಕೆ.ಶಿವಪ್ಪ ಮೊ.9148070689, ಅಧೀಕ್ಷಕರಾದ ಲೀಲಾ ಜಿ.ಎನ್. ಮೊ:9591257142 ಮತ್ತು ದತ್ತಾಂಶ ನಮೂದು ಸಹಾಯಕರಾದ ಮಂಗಳ ಎನ್ ಮೊ.9844706707ಗೆ ಸಂಪರ್ಕಿಸಬಹುದಾಗಿದೆ ಎಂದು ಶ್ರೀಶಂಕರ್ ಆನಂದ್ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.