ಹಂಪಿ ಪ್ರವಾಸಿ ಪೊಲೀಸ್ ಠಾಣೆಯಿಂದ ದ್ವಿ ಚಕ್ರ ಕಳ್ಳರ ಸೆರೆ

Loading

ಹಂಪಿ : ಪೊಲೀಸರಿಂದ ದ್ವಿ ಚಕ್ರ ವಾಹನಗಳ 03 ಜನ ಕಳ್ಳರಲ್ಲಿ 02 ಜನ ಕಳ್ಳರನ್ನು ಬಂಧಿಸಿ ಅವರಿಂದ ಅಂದಾಜು 5,50,000/- ರೂ ಗಳು ಬೆಲೆ ಬಾಳುವ ವಿವಿಧ ಕಂಪನಿಯ 06 ದ್ವಿಚಕ್ರ ವಾಹನಗಳ ವಶ.

ದಿನಾಂಕ 17.08.2023 ರಂದು ಬೆಳಿಗ್ಗೆ, 10-30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರು ಸಾರಾಂಶ, ನಿನ್ನೆ, ದಿನ ದಿನಾಂಕ: 15.08.2023 ರಂದು ಗಾಳೆಮ್ಮ ಗುಡಿ ಗ್ರಾಮದ ಶ್ರೀ ಗಾಳೆಮ್ಮ ದೇವಿ ದೇವಸ್ಥಾನದ ತೇರಿನ ಮನೆ ರಾತ್ರಿ 10-00 ಗಂಟೆ ಸುಮಾರಿಗೆ ಬೈಕ್ ನಿಲ್ಲಿಸಿ, ಹಾಂಡಲ್ ಲಾಕ್ ಮಾಡಿ ಮೂವರು ದೇವಸ್ಥಾನದಲ್ಲಿ, ಮಲಗಿಕೊಂಡವು. ನಿನ್ನೆ ದಿನ ದಿನಾಂಕ: 16.08.2023 ರಂದು ಬೆಳಗಿನ ಜಾವ 4-30 ಗಂಟೆ ಮಧ್ಯದ ಅವಧಿಯಲಿ, ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, Cr no=35/2023 ipc 379 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ಪ್ರಕರಣದಲಿ, ತನಿಖೆ ಕೈಗೊಂಡ ಆರೋಪಿತರಾದ ಕೊಂಗ ಲಕ್ಷ್ಮಣ @ ಡೆಲಿ, ತಂದೆ, ಅಣಾಮ, 62 ವರ್ಷ, ವೆಲಾ (ದೇವರು) ಗೌಂಡರ್, ಜನಾಂಗ, ಕೂಲಿ ಕೆಲಸ, ವಾಸ 09 ನೇ ವಾರ್ಡ್, ಅಜಾದ್ ನಗರ, ಮಸೀದಿ ಹತ್ತಿರ, ಹೊಸಪೇಟೆ, ವಿಜಯನಗರ ಜಿಲ್ಲೆ, ಮತ್ತು ಮೋಹನ್ ತಂದೆ ಲೇಟ್ ಕುಮಾರ್, 33 ವರ್ಷ ವೆಲಾಳ್ ಗೌಂಡರ್ ಜನಾಂಗ, ಮೆಕ್ಯಾನಿಕ್ ಕೆಲಸ, ವಾಸ 08 ನೇ ವಾರ್ಡ್, ಫಿ ಹೌಸ್ ಹತ್ತಿರ, ಕಮಲಾಪುರ ಪಟ್ಟಣ, ಹೊಸಪೇಟೆ ತಾಲೂಕು, ವಿಜಯನಗರ ಜಿಲ್ಲೆ, ಇವರನ್ನು ಹಿಡಿದು, ದಸ್ತಗಿರಿ ಕೂಲಂಕುಶವಾಗಿ ವಿಚಾರಣೆ ನಡೆಸಿ 03 ಜನ ಆರೋಪಿತರು ಹಂಪಿ ಪೊಲೀಸ್ ಠಾಣೆಯ ಸರಹದ್ದಿನ ಗ್ರಾಮಗಳಲ್ಲಿ, ಮತ್ತು ವಿವಿಧ ಗ್ರಾಮಗಳಲ್ಲಿ 06 ನೇ ಸೈಕಲ್ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡು ಸ್ವ-ಇಚಾ ಹೇಳಿಕೆಯನ್ನು ನೀಡಿರುತ್ತಾರೆ. ಆರೋಪಿ 03 ದೇವೇಂದ್ರ ಪರಾರಿಯಲ್ಲಿರುತ್ತಾನೆ. ಈ ಮೇಲ್ಕಂಡ ಆರೋಪಿಗಳಿಂದ ಅಂದಾಜು 5,50,000 ರೂಗಳ ಬೆಲೆ ಬಾಳುವ ಕಂಪನಿಯ ಒಟ್ಟು 06 ದಿ ಚಿತ್ರಗಳನ್ನು ವಶಪಡಿಸಿಕೊಂಡು ಮುಂದಿನ ತನಿಖೆ ಕೈಗೆತ್ತಿಕೊಳ್ಳಲಾಗಿದೆ.

ಸದರಿ ಕಾರ್ಯಾಚರಣೆಯನ್ನು ಮಾನ್ಯ ಶ್ರೀ ಹರಿಬಾಬು ಎಲ್. ಪೊಲೀಸ್ ಅಧೀಕ್ಷಕರು ವಿಜಯನಗರ ಜಿಲ್ಲೆ ಹಾಗೂ ಮಾನ ಡಾ|| ಮಂಜುನಾಥ ಡಿ.ವೈ.ಎಸ್.ಪಿ ಸಾಹೇಬರು ಹೊಸಪೇಟೆ ಮತ್ತು ಶಿವರಾಜ್, ಇಂಗಳೆ ಸಿಪಿಐ ಹಂಪಿ ವೃತ್ತ ರವರ ಮಾರ್ಗದರ್ಶನದಲ್ಲಿ, ಹಂಪಿ ಪೊಲೀಸ್ ಠಾಣೆ ಪಿ.ಎಸ್.ಐ. ಶ್ರೀ ಶಿವಕುಮಾರ್ ನಾಯ್ ರವರ ನೇತೃತ್ವದಲ್ಲಿ ಎ.ಎಸ್.ಐ ‘ಶ್ರೀ ಕೆ.ಕರಿಯಪ್ಪ, ಸಿಬ್ಬಂದಿಯವರಾದ ಶರಣಪ್ಪ, ಕೆಂಚಪ್ಪ, ಮೈಲಾರಪ್ಪ, ಮಾರುತಿ ಮಂಜುನಾಥ, ನಾಗರಾಜ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊ,ಡಿದರು.

Leave a Reply

Your email address will not be published. Required fields are marked *