
ವಿಜಯನಗರ ( ಹೊಸಪೇಟೆ ): ಹಂಪಿ ವಸತಿ ಗೃಹದಲ್ಲಿ ಕಳ್ಳತನವಾಗಿದ್ದ ಫೋಟೋ ಶೂಟ್ ಕ್ಯಾಮೆರಾಗಳು, ಲೆನ್ಸ್ ಹಾಗೂ ಇತರೇ ಪರಿಕರಗಳ ಅಂತರ್ ರಾಜ್ಯ ಕಳ್ಳನ ಬಂಧನ: ರೂ. 12,63,000/- ಬೆಲೆಬಾಳುವ ವಸ್ತುಗಳ ಜಪ್ತಿ
ದಿನಾಂಕ 23/08/2023 ರಂದು ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ಬೆಂಗಳೂರಿನ ಪ್ರವೀಣ್ ಕುಮಾರ್ ಈತನಿಂದ ಪೋಟೋ ಮಾಡುವ ಸುಮಾರು 8,50,000/- ರೂ ಮೌಲ್ಯದ ಕಾಮಾರಾ ಹಾಗೂ ಬೆನ್ ಗಳ ಜೊತೆಯಲಿ, ಬಂದ ಆಂಧ್ರಪ್ರದೇಶದ ಆರೋಪಿ ಕಾರ್ತಿಕ್ ಚೌಧರಿ ಆಕ್ಕಿನೇನಿ ಈತನನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಹಂಪಿಯಲ್ಲಿ ಹೋಗಿದ್ದು, ನಂಬರ್ 37/2023 ಕಲಂ 379 ಐಪಿಸಿ ರಿತ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
ಈ ಪ್ರಕರಣದಲ್ಲಿ, ತನಿಖೆಗೊಂಡ ಹಂಪಿ ವೃತ್ರದ ಸಿ.ಪಿ.ಐ ರವರಾದ ಶ್ರೀ ಶಿವರಾಜ ಎಸ್.ಮತ್ತು ಸಿಬ್ಬಂದಿ ಆರೋಪಿತನಾದ ಕಾರ್ತಿಕ್ ಚೌಧರಿ ಅಕ್ಕಿನೇನಿ ತಂದೆ ವೆಂಕಟೇಶಲು, ವಾಸ ವೇಲುರ ಗ್ರಾಮ ಪಶ್ಚಿಮ ಗೋದಾವರಿ ಜಿಲ್ಲೆ, ಆಂಧ್ರಪ್ರದೇಶ ರಾಜ್ಯ ಈತನನ್ನು ದಸ್ತಗಿರಿ ಮಾಡಿ ಆತನಿಂದ ಈ ಕೆಳಕಂಡ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸದರಿ ಕಾರ್ಯಾಚರಣೆಯನ್ನು, ಶ್ರೀ ಹರಿಬಾಬು ಬಿ.ಎಲ್.ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು ಜಿಲ್ಲೆ ಹಾಗೂ ಶ್ರೀ ಮಂಜುನಾಥ ಡಿ.ಎಸ್.ಪಿ ಹೊಸಪೇಟೆರವರ ಮಾರ್ಗದರ್ಶನದಲ್ಲಿ, ಶ್ರೀ ಶಿವರಾಜ ಎಸ್.ಪಿ.ಐ ಹಂಪಿ ವೃತ್ತಿಯ ನೇತೃತ್ವದ, ಶಿವಕುಮಾರನಾಯ್ಕ್ , ಪಿ.ಎಸ್.ಐ ಹಂಪಿ ಪ್ರವಾಸಿ ಠಾಣೆ, ಜಾವೇದ್ ಅಶ್ರಫ್ ಹೆಚ್.ಸಿ ಚಿತ್ತವಾಡಗಿ ಪೊಲೀಸ್ ಠಾಣೆ , ಕರಿಬಸಜ್ಜ , ಹೆಚ್.ಸಿ, ಶರಣಪ್ಪ, ಪಿ.ಸಿ. ಮೈಲಾರಪ್ಪ, ಸಿ, ಮಾರುತಿ ಪಿ .ಸಿ ಮತ್ತು ನಾಗರಾಜ ಪಿ .ಸಿ ಹಂಪಿ ಪ್ರವಾಸಿ ಪೊಲೀಸ್ ಠಾಣೆ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.