ಹಗರಿಬೊಮ್ಮನಹಳ್ಳಿ : ಪಟ್ಟಣದ ರಾಮನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಅಸ್ಥಿಪಂಜರವಾಗಿದೆ.
ಕಳೆದ ಹತ್ತು ವರ್ಷದಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ತುಂಬನೂ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ಬಹು ದೊಡ್ಡ ಕ್ರಾಂತಿಯೇ ಜರುಗಿತ್ತೇನ್ನುವ ಮಾಧ್ಯಮಗಳಲ್ಲಿ ದಾಖಲಾಗಿದೆ.ಆದರೇ ಈ ಕ್ರಾಂತಿಗೆ ರಾಮನಗರದ ಅಸ್ಥಿಪಂಜರವಾಗಿರುವ ಶುದ್ಧವಾದ ನೀರಿನ ಘಟಕ ಬಹು ದೊಡ್ಡ ಸವಾಲಾಗಿ ನಿಂತಿದೆ.
ಈ ಘಟಕ ಸ್ಥಾಪನೆಗೊಂಡ ಬೆರಳೆಣಿಕೆ ದಿನಗಳ ಕಾಲ ಮಾತ್ರವೇ ಸರಿಯಾಗಿ ಕಾರ್ಯನಿರ್ವಹಿಸಿದ್ದು ಹೊರತು ಪಡಿಸಿದರೇ ಅಲ್ಲಿಂದ ಈವರೆಗೂ ಅಸ್ಥಿಪಂಜರವಾಗಿ ನಿಂತಿರುವುದೇ ಹೆಚ್ಚು. ಒಂದು ಶುದ್ಧವಾದ ಕುಡಿಯುವ ನೀರಿನ ಘಟಕದ ನಿರ್ಮಾಣಕ್ಕೆ ಅಂದಾಜು ಹತ್ತು ಲಕ್ಷರೂಪಾಯಿ ಮೇಲೆಯೇ ಅನುದಾನ ವ್ಯಯವಾಗಿರುತ್ತೆ. ಇಷ್ಟೊಂದು ಹಣ ವೆಚ್ಚಮಾಡಿದ್ದು ಪ್ಲೊರೈಡ್ ಯುಕ್ತ ನೀರಿನಿಂದ ಸಾರ್ವಜನಿಕರನ್ನು ರಕ್ಷಿಸಲು.
ಆದರೇ ಅದು ಸಮರ್ಪಕವಾಗಿ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುವುದನ್ನು ರಾಮನಗರದ ಅಸ್ಥಿಪಂಜರವಾಗಿರುವ ಶುದ್ಧ ಕುಡಿಯುವ ನೀರಿನ ಘಟಕವೇ ಜೀವಂತ ಸಾಕ್ಷಿ.
ಇದು ಜಸ್ಟ್ ಸ್ಯಾಂಪಲ್. ಇದೇ ತರಹ ಸರ್ಕಾರಿ ಅನುದಾನ ದುರ್ಬಳಕೆಯಾಗಿರುವ ಶುದ್ದ ಕುಡಿಯುವ ನೀರಿನ ಘಟಕಗಳ ಸರಮಾಲೆಯೇ ಇಡೀ ಕ್ಷೇತ್ರದ ತುಂಬನೂ ವ್ಯಾಪಿಸಿದೆ.ಹಾಗೇನೆ ಶಾಲೆ ಮತ್ತು ಅಂಗನವಾಡಿಗಳಲ್ಲಿ ತೂಗುಹಾಕಿರುವ ಫಿಲ್ಟರ್ ಗಳ ಬಗ್ಗೆನೂ ಸಾಕಷ್ಟು ಮಾಹಿತಿ ಸಿಕ್ಕಿದ್ದು ಅದನ್ನು ಅತೀ ಶೀಘ್ರವಾಗಿ ಬಯಲಿಗೆ ಬರಲಿದೆ.
ವರದಿ : ಹುಳ್ಳಿ ಪ್ರಕಾಶ್ ಪತ್ರಕರ್ತರು
