ಭಾರತೀಯರ ಹೆಮ್ಮೆಯ ಚಂದ್ರಯಾನ 3

Loading

ಶ್ರೀಹರಿಕುಟಾ : ಚಂದ್ರಯಾನ 3 ಭಾರತೀಯ ವಿಕ್ರಮ ನೌಕೆ ನಿನ್ನೆ ಮಧ್ಯಾಹ್ನ 2:35ಕ್ಕೆ ನಭಾಕ್ಕೆ ಹಾರಿ ಚಂದ್ರನ ಅಂಗಳಕ್ಕೆ ಪಯಣ ಆರಂಭಿಸಿದೆ. ದೇಶದ ವಿಜ್ಞಾನಿಗಳ ಪರಿಶ್ರಮಕ್ಕೆ ಈ ಬಾರಿ ‌ ಯಶಸ್ಸು ಸಿಗಲೆಂದು ಮತ್ತು ಸುಗಮವಾಗಿ ಲ್ಯಾಂಡಿಂಗ್‌ನ ಗುರಿ ತಲುಪಲಿ ಎಂದು ದೇಶದ ಹಲವು ದೇವಸ್ಥಾನ ಗಳಲ್ಲಿ ಪೂಜೆ ನೆರವೇರಿಸಲಾಗಿದೆ ,

ಚಂದ್ರಯಾನ 2ರಲ್ಲಿ ಲ್ಯಾಂಡರ್ ನಿರೀಕ್ಷೆಯಂತೆ ಸಾಫ್ಟ್ ಲ್ಯಾಂಡಿಂಗ್ ಆಗುವಲ್ಲಿ ವಿಫಲವಾಗಿತ್ತು. ಆದರೆ ಈ ಹೊಸ ಮಾದರಿಯ ಲ್ಯಾಂಡರ್ ನಿರ್ದಿಷ್ಟ ಚಂದ್ರನ ಜಾಗದಲ್ಲಿ ಸುಗಮವಾಗಿ ಇಳಿಯುವ ಸಾಮರ್ಥ್ಯ ಹೊಂದಿದೆ. ಚಂದ್ರನ ಮೇಲ್ಮೈನಲ್ಲಿ ಓಡಾಡುವ ವೇಳೆ ರಾಸಾಯನಿಕ ವಿಶ್ಲೇಷಣೆಗಳನ್ನು ನಡೆಸುವಂತೆ ರೋವರ್ ಅನ್ನು ನಿಯೋಜಿಸುವ ಸಾಮರ್ಥ್ಯವಿದೆ ಎಂದು ಇಸ್ರೋ ಹೇಳಿದೆ.

ಬಹು ನಿರೀಕ್ಷಿತ ಚಂದ್ರಯಾನ-3 ಉಡಾವಣೆ ದಿನಾಂಕ ಘೋಷಿಸಿದ ಇಸ್ರೋ ಹಿಂದಿನ ಲ್ಯಾಂಡರ್‌ಗಿಂದಲೂ ಈ ಬಾರಿಯ ವಿಕ್ರಮ್ ಲ್ಯಾಂಡರ್ ಪ್ರಬಲವಾದ ಕಾಲುಗಳನ್ನು ಹೊಂದಿದೆ. ಚಂದ್ರಯಾನ-2ರ ಭಾಗಶಃ ವೈಫಲ್ಯದ ಬಳಿಕ ಕೆಲವು ಪಾಠ ಕಲಿತಿರುವ ಇಸ್ರೋ, ಹಲವಾರು ಬದಲಾವಣೆಗಳನ್ನು ಮಾಡಿದೆ. ಚಂದ್ರಯಾನ -3 ಯೋಜನೆಯು ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಶೋಧಿಸುವ ಗುರಿ ಹೊಂದಿದೆ. ಚಂದ್ರನ ಅಂಗಳದಲ್ಲಿ ಸುಗಮವಾಗಿ ನೌಕೆಯನ್ನು ಇಳಿಸುವುದು ಪ್ರಮುಖ ಗುರಿಯಾಗಿದೆ. ಇದು ಸಾಧ್ಯವಾದರೆ ಇಂತಹ ಮೈಲುಗಲ್ಲು ಸಾಧಿಸಿದ ಜಗತ್ತಿನ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Leave a Reply

Your email address will not be published. Required fields are marked *