( ವಿಜಯ ನಗರ )ಹೊಸಪೇಟೆ: ವಿವಿಧ ಬಣ್ಣದ ಹಲವು ಸಣ್ಣ ತುಣುಕುಗಳನ್ನು ದಾರದಿಂದ ಹೊಅದು ಜೋಡಿಸಿ, ಅದರ ಮೇಲೆ ಕಸೂತಿ ಮಾಡುವ ಲಂಬಾಣಿ ಮಹಿಳೆಯರ ಕಲೆ, ಶ್ರಮ ಸಂಸ್ಕೃತಿಯ ಪ್ರತೀಕ. ಆದಿ ಕಾಲದ ಮಾನವನ ಸುಪ್ತ ಪ್ರಜ್ಞೆಯಲ್ಲಿ ಅರಳಿದ ಕಲೆಗಳು ಇಂದು ತಂತ್ರಜ್ಞಾನದ ಅತ್ಯುನ್ನತ ಮಟ್ಟ ತಲುಪಿವೆ. ತಾಂತ್ರಿಕ ಕಾಲಘಟ್ಟದಲ್ಲೂ ಲಂಬಾಣಿ ಮಹಿಳೆಯರು ಉಳಿಸಿ ಬೆಳಸಿಕೊಂಡು ಬಂದ ಕಸೂತಿ ಕಲೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರುವ ಕ್ಷಣಕ್ಕೆ ಹಂಪಿಯಲ್ಲಿ ನಡೆಯುತ್ತಿರುವ ಜಿ ೨೦ ಶೃಂಗಸಭೆ ಸಾಕ್ಷಿಯಾಗಿದೆ.
ಸೋಮವಾರ ವಿಶ್ವವಿಖ್ಯಾತ ಹಂಪಿಯ ಎದುರು ಬಸವಣ್ಣ ಮಂಟಪದ ಬಳಿ ಲಂಡನ್ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ನ ಅಧಿಕೃತ ತೀರ್ಪುಗಾರ ರಿಷಿನಾಥ್ ಲಂಬಾಣಿ ಕಸೂತಿ ಕಲೆಗೆ ಸಂದ ಗಿನ್ನಿಸ್ ರೆಕಾರ್ಡ್ ಪ್ರಮಾಣ ಪತ್ರವನ್ನು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪಲ್ಲಾದ್ ಜೋಶಿ ಹಾಗೂ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ ಮೋಹನ್ ಅವರಿಗೆ ಹಸ್ತಾಂತರಿಸಿದರು. ಸಂಡೂರಿನ ಲಂಬಾಣಿ ಕಲಾ ಕೇಂದ್ರದ ೪೫೦ಕ್ಕೂ ಹೆಚ್ಚು ಮಹಿಳೆಯರು ೧೭೫೫ ವಿವಿಧ ರಚನಾ ಕ್ರಮವುಳ್ಳ ಹಸ್ತದಿಂದ
ರಚಿಸಿದ ಕಸೂತಿಗಳನ್ನು ಪ್ರದರ್ಶನಕ್ಕೆ ಇರಿಸಿದ್ದರು. ಈ ಹಿಂದಿನ ಗಿನ್ನೆಸ್ ದಾಖಲೆಯಲ್ಲಿ 1000 ಕಸೂತಿ ಕಲೆಗಳನ್ನು ಪ್ರದರ್ಶನಕ್ಕೆ ಇರಿಲಾಗಿತ್ತು.
ಲಂಬಾಣಿ ಕಸೂತಿಗೆ ಜಿ.ಐ. ಟ್ಯಾಗ್ ೧೯೮೮ ರಲ್ಲಿ ಸಂಡೂರಿನಲ್ಲಿ ಕೇವಲ ಲಂಬಾಣಿ ಮಹಿಳೆಯರಿಂದ ಆರಂಭವಾದ ಲಂಬಾಣಿ ಕುಶಲ ಕಲಾ ಕೇಂದ್ರ ಇಂದು ೬೦೦ ಕುಶಲ ಕಸೂತಿ ಕಲೆ ಕಲಿತ ಮಹಿಳೆಯರಿಂದ ನಡೆಸಲ್ಪಡುತ್ತಿದೆ. ಪಾರಂಪರಿಕವಾಗಿ ಮನೆಗಳು ಹಾಗೂ ತಾಂಡಗಳಿಗೆ ಸೀಮಿತವಾಗಿದ್ದ ಲಂಬಾಣಿ ಕಸೂತಿ ಕಲೆಗೆ ಸಾಂಸ್ಥಿಕ ರೂಪ ನೀಡಿ ಜಿ.ಐ.(ಗ್ಲೋಬಲ್ ಇಂಡಿಕೇಷನ್) ಟ್ಯಾಗ್ ಪಡೆಯುವಲ್ಲಿ ಸಂಡೂರಿನ ಕಲಾ ಕೇಂದ್ರ ಯಶಸ್ವಿಯಾಗಿದೆ. ವಿವಿಧ ರೀತಿಯ ೨೯ ಕಲಾತ್ಮಕ ಕಸೂತಿಗಳನ್ನು ಇಲ್ಲಿ ಮಾಡಲಾಗುತ್ತಿದೆ. ಈ ಕೇಂದ್ರಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿ, ಯುನಿಸ್ಟೋ ಮನ್ನಣೆ ಹಾಗೂ ಕಮಲಾದೇವಿ ಛಟ್ಟೋಪಾಧ್ಯಾಯ ಪ್ರಶಸ್ತಿ ಲಭಿಸಿದೆ. ಈಗ ಹಂಪಿಯಲ್ಲಿ. 28-90 ದಾಖಲೆಯು ಮುಡಿಗೇರಿದೆ. ಶೃಂಗ ಸಭೆಯಲ್ಲಿ ಗಿನ್ನಿಸ್
೧೦ಎಚ್ಪಿಟ೩- ಹಂಪಿಯಲ್ಲಿ ಆಯೋಜಿಸಿದ್ದ ಲಂಬಾಣಿ ಕಸೂತಿ ಕಲೆ ಪ್ರದರ್ಶನ ಗಿನ್ನಿಸ್ ದಾಖಲೆ ಸೇರಿದ
ಪ್ರಮಾಣಪತ್ರವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯರಿಗೆ ಗಿನ್ನಿಸ್ ಸಂಸ್ಥೆ ಪ್ರತಿನಿಧಿ ಋಷಿನಾಥ ಸೋಮವಾರ ಹಸ್ತಾಂತರಿಸಿದರು.
೧೦ಎಚ್ಪಿಐ೪- ಹಂಪಿಯಲ್ಲಿ ಆಯೋಜಿಸಿದ್ದ ಲಂಬಾಣಿ ಕಸೂತಿ ಕಲೆ ಪ್ರದರ್ಶನ ಗಿನ್ನಿಸ್ ದಾಖಲೆ ಸೇರಿದ ಪ್ರಮಾಣಪತ್ರ.
೧೦ಎಚ್ಪಿ೨೫- ಸಂಡೂರು ಕುಶಲ ಕಲಾ ಕೇಂದ್ರದ ಲಂಬಾಣಿ ಮಹಿಳೆಯರು ಹಂಪಿಯ ಕಸೂತಿ ಕಲೆ ಪ್ರದರ್ಶನದಲ್ಲಿ.
೧೦ಎಚ್ಪಿಟಿ೬,೭- ಹಂಪಿಯಲ್ಲಿ ಆಯೋಜಿಸಿದ್ದ ಲಂಬಾಣಿ ಕಸೂತಿ ಕಲೆ ಪ್ರದರ್ಶನದಲ್ಲಿ ಜಿ-೨೦ ರಾಷ್ಟ್ರಗಳ ಪ್ರತಿನಿಧಿಗಳು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಉಮೇಶ್ ಜಾಧವ್ ಅವರು ಕಸೂತಿ ಕಲೆಯನ್ನು ಪ್ರದರ್ಶಿಸಿದರು.



